ಕರ್ನಾಟಕ

karnataka

ETV Bharat / state

ಅಮಾವಾಸ್ಯೆ ಎಫೆಕ್ಟ್.. ಮೈಸೂರಿನಲ್ಲಿ ತಾಲೀಮಿಗೆ ಬ್ರೇಕ್, ವಿಶ್ರಾಂತಿಯಲ್ಲಿರುವ ಗಜಪಡೆ! - ಆನೆಗಳಿಗೆ ಎಣ್ಣೆ ಸ್ನಾನ

ಅಮಾವಾಸ್ಯೆ ಪರಿಣಾಮದಿಂದ ಗಜಪಡೆ ಕ್ಯಾಪ್ಟನ್ ಅರ್ಜುನ ಸೇರಿದಂತೆ 5 ಆನೆಗಳು ಇಂದು ವಿಶ್ರಾಂತಿ ಪಡೆಯುತ್ತಿವೆ. ಇಂದು ಅಮಾವಾಸ್ಯೆ ಇರುವುದರಿಂದ ಆರು ಆನೆಗಳಿಗೆ ಅರಮನೆ ಹೊರಾವರಣದಲ್ಲಿರುವ ಆನೆಗಳ ತೊಟ್ಟಿಯಲ್ಲಿ ಆನೆಗಳಿಗೆ ಎಣ್ಣೆ ಸ್ನಾನ ಮಾಡಿಸಿ , ನಂತರ ಅವುಗಳಿಗೆ ಉಪಾಹಾರ ನೀಡಿ ವಿಶ್ರಾಂತಿ ನೀಡಲಾಗುತ್ತಿದೆ.

ವಿಶ್ರಾಂತಿಯಲ್ಲಿರುವ ಗಜಪಡೆ

By

Published : Aug 30, 2019, 9:36 AM IST

ಮೈಸೂರು:ಅಮಾವಾಸ್ಯೆ ಪರಿಣಾಮದಿಂದ ಗಜಪಡೆ ಕ್ಯಾಪ್ಟನ್ ಅರ್ಜುನ ಸೇರಿದಂತೆ 5 ಆನೆಗಳು ಇಂದು ವಿಶ್ರಾಂತಿ ಪಡೆಯುತ್ತಿವೆ.

ಅಮಾವಾಸ್ಯೆ ಎಫೆಕ್ಟ್ ತಾಲೀಮಿಗೆ ಬ್ರೇಕ್, ವಿಶ್ರಾಂತಿಯಲ್ಲಿರುವ ಗಜಪಡೆ..

ಅಗಸ್ಟ್‌ 26ರ ಸೋಮವಾರ ಅರಮನೆಗೆ ಆಗಮಿಸಿದ ಕ್ಯಾಪ್ಟನ್ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷಿ, ಧನಂಜಯ ಹಾಗೂ ಈಶ್ವರ ಆನೆಗಳನ್ನು ಮಂಗಳವಾರ ತೂಕ ಮಾಡಿ, ಬುಧವಾರದಿಂದ ತಾಲೀಮು ಆರಂಭಿಸಲಾಯಿತು. ಇಂದು ಅಮಾವಾಸ್ಯೆ ಇರುವುದರಿಂದ ಆರು ಆನೆಗಳಿಗೆ ಅರಮನೆ ಹೊರಾವರಣದಲ್ಲಿರುವ ಆನೆಗಳ ತೊಟ್ಟಿಯಲ್ಲಿ ಆನೆಗಳಿಗೆ ಎಣ್ಣೆ ಸ್ನಾನ ಮಾಡಿಸಿ, ನಂತರ ಅವುಗಳಿಗೆ ಉಪಾಹಾರ ನೀಡಿ ವಿಶ್ರಾಂತಿ ನೀಡಲಾಗುತ್ತದೆ.

ಅಮಾವಾಸ್ಯೆ ವೇಳೆ ಹೊರಗಡೆ ಕರೆದುಕೊಂಡು ಹೋದರೆ ಆನೆಗಳಿಗೆ ದೃಷ್ಟಿ ತಾಗುತ್ತದೆ‌ ಹಾಗೂ ಆನೆಗಳ ವರ್ತನೆಯೂ ಬದಲಾಗುತ್ತದೆಯೆಂಬ ಕಾರಣದಿಂದ ವಿಶ್ರಾಂತಿ ನೀಡಲಾಗುತ್ತಿದೆ.

ABOUT THE AUTHOR

...view details