ಮೈಸೂರು: ನಾಡ ಹಬ್ಬ ದಸರಾ ಪ್ರಮುಖ ಕೇಂದ್ರ ಬಿಂದುವಾದ ಗಜಪಡೆಗಳು ಈಗಾಗಲೇ ಅರಮನೆಯೊಳಗಡೆ ಆಗಮಿಸಿದ್ದು, ಅವುಗಳಿಗೆ ಉಳಿದುಕೊಳ್ಳಲು ಪ್ರತ್ಯೇಕವಾಗಿ ಶೆಡ್ಗಳನ್ನು ನಿರ್ಮಿಸಿ, ಗಜಪಡೆಗಳ ಸಂರಕ್ಷಣೆ ಹಾಗೂ ಚಲನವಲನಗಳನ್ನು ಗಮನಿಸಲು ಅರಣ್ಯ ಇಲಾಖೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ.
ಅರಮನೆಗೆ ಬಂದ ಗಜಪಡೆ.... ಆನೆಗಳ ಕಣ್ಗಾವಲಿಗೆ 6 ಸಿಸಿ ಕ್ಯಾಮೆರಾ - mysore dasara news
ಪ್ರವಾಸಿಗರು ಹಾಗೂ ಸ್ಥಳೀಯರು ಆನೆಗಳ ಮುಂದೆ ಹೋಗದಂತೆ ಎಚ್ಚರಿಕೆ ನೀಡುವ ಉದ್ದೇಶದಿಂದ 6 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಗಜಪಡೆಗೆ ಸಿಸಿಟಿವಿ ಕಣ್ಗಾವಲು
ಪ್ರತ್ಯೇಕವಾಗಿ ಶೆಡ್ ನಲ್ಲಿರುವ ಗಜಪಡೆ ಕ್ಯಾಪ್ಟನ್ ಅರ್ಜುನ, ಒಂದೇ ಶೆಡ್ ನಲ್ಲಿರುವ ವಿಜಯ, ಅಭಿಮನ್ಯು, ವರಲಕ್ಷಿ, ಧನಂಜಯ, ಈಶ್ವರ ಆನೆಗಳ ರಕ್ಷಣೆ ಹಾಗೂ ಚಲನವಲನ ಗಮನಿಸುವಿಕೆ, ಪ್ರವಾಸಿಗರು ಹಾಗೂ ಸ್ಥಳೀಯರು ಆನೆಗಳ ಮುಂದೆ ಹೋಗದಂತೆ ಎಚ್ಚರಿಕೆ ನೀಡುವ ಉದ್ದೇಶದಿಂದ 6 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎರಡನೇ ತಂಡದಲ್ಲಿ ಬರುವ 8 ಆನೆಗಳು ವಾಸ್ತವ್ಯ ಹೂಡುವ ಶೆಡ್ಗೂ ಕೂಡ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.