ಮೈಸೂರು: ಕಾಡಾನೆಗಳ ಹಿಂಡು ಜಮೀನಿಗೆ ನುಗ್ಗಿ ಜೋಳದ ಫಸಲನ್ನು ತಿಂದು, ನಂತರ ನಾಶ ಮಾಡಿ ಹೋಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಜಮೀನಿಗೆ ನುಗ್ಗಿ ಜೋಳದ ಬೆಳೆ ನಾಶ ಮಾಡಿದ ಕಾಡಾನೆ ಹಿಂಡು - ಮೈಸೂರಿನ ಎಚ್.ಡಿ.ಕೋಟೆ
ಜಮೀನಿಗೆ ನುಗ್ಗಿ ಜೋಳದ ಬೆಳೆ ನಾಶ ಮಾಡಿದ ಕಾಡಾನೆ ಹಿಂಡು. ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕಿನ ಬಸವನಗಿರಿ ಬಿ.ಹಾಡಿಯಲ್ಲಿ ಬಾಸ್ಕರ್, ಮಾರ, ರವಿ, ಡಿ.ಎಂ.ಬಸವರಾಜು, ಎಂ.ಬೋಮ್ಮ, ಕೆಂಪ, ಕಾಳ, ರಾಜು ಇವರ ಜಮೀನಿಗೆ ನುಗ್ಗಿದ ಆನೆಗಳ ಹಿಂಡು, ಜಮೀನಿನಲ್ಲಿ ಬೆಳೆದ ಜೋಳದ ಫಸಲನ್ನು ತಿಂದು ಬೆಳೆಯನ್ನು ತುಳಿದು ನಾಶ ಮಾಡಿ ಹೋಗಿವೆ.
ತಾರಕ ಜಲಾಶಯದ ಸಮೀಪ ಬಸವನಗಿರಿ ಬಿ.ಹಾಡಿ ಇರುವುದರಿಂದ ಜಲಾಶಯದತ್ತ ನೀರು ಕುಡಿಯಲು ಬಂದ ಆನೆಗಳು, ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆ ತಿಂದು ನಾಶ ಮಾಡುತ್ತವೆ.ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆನೆಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಕೆಲ ಆದಿವಾಸಿಗರು ಜಮೀನಿನ ಬಳಿ ಹೋಗಲು ಹೆದರುತ್ತಾರೆ. ಆನೆಗಳ ಹಾವಳಿ ತಪ್ಪಿಸಿ ರಕ್ಷಣೆ ನೀಡಬೇಕು ಎಂಬುವುದು ಆದಿವಾಸಿಗಳ ಒತ್ತಾಯವಾಗಿದೆ.