ಮೈಸೂರು : ಚಿರತೆಗಳ ಹಾವಳಿಯಿಂದ ತಪ್ಪಿಸಲು ಚಿರತೆ ಕಾರ್ಯಪಡೆ ರಚನೆ ಆಯಿತು. ಆದರೆ ಕಾಡಂಚಿನ ಗ್ರಾಮಗಳಿಗೆ ನುಗ್ಗಿ ತೊಂದರೆ ಕೊಡುವ ಕಾಡಾನೆಗಳ ಸೆರೆಗೆ ಆನೆ ಕಾರ್ಯಪಡೆಯನ್ನು ಎರಡು ತಿಂಗಳ ಹಿಂದೆಯೇ ರಾಜ್ಯದ ಐದು ಜಿಲ್ಲೆಗಳಲ್ಲಿ ರಚನೆ ಮಾಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಹುಣಸೂರಿನಲ್ಲಿ ಆನೆ ಕಾರ್ಯಪಡೆ ರಚನೆ ಮಾಡಲಾಗಿದ್ದು, ಇದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಹಳೇ ಮೈಸೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ದಾಳಿಯಿಂದ ಜನ, ಜಾನುವಾರು, ಬೆಳೆ ಹಾಗೂ ಆಸ್ತಿ ಹಾನಿಯಾಗುತ್ತಿದ್ದು. ಇದನ್ನು ತಡೆಯಲು ಎರಡು ತಿಂಗಳ ಹಿಂದೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅರಣ್ಯ ಇಲಾಖೆ ಮೈಸೂರು ಜಿಲ್ಲೆಯ ಹುಣಸೂರು, ಕೊಡಗು ಜಿಲ್ಲೆಯ ಮಡಿಕೇರಿ, ಹಾಸನ ಜಿಲ್ಲೆಯ ಸಕಲೇಶಪುರ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸೇರಿದಂತೆ ಐದು ಕಡೆ ಆನೆ ಕಾರ್ಯಪಡೆ ನೇಮಕ ಮಾಡಿ. ಈ ಸ್ಥಳಗಳಲ್ಲಿ ನಾಲ್ಕು ಕಾರ್ಯಪಡೆಗಳನ್ನು ರಚಿಸಲಾಗಿದೆ.
ಪ್ರತಿ ಕಾರ್ಯಪಡೆಗೆ ಡಿಸಿಎಫ್, ಎಸಿಎಫ್, ಆರ್ ಎಫ್ ಒ, ನಾಲ್ವರು ಡಿಆರ್ ಎಫ್ ಒ, ಎಂಟು ಗಾರ್ಡ್ಗಳು 32 ಮಂದಿ ದಿನಗೂಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು. ಈ ನಾಲ್ಕು ತಂಡಗಳು ಐದು ಜಿಲ್ಲೆಗಳಲ್ಲಿ ನಡೆಯುವ ಕಾಡಾನೆಗಳ ಉಪಟಳವನ್ನು ತಡೆಯುವುದು ಹಾಗೂ ಕಾಡಾನೆಗಳನ್ನು ಸೆರೆ ಹಿಡಿಯುವುದು ಇದರ ಕೆಲಸವಾಗಿದ್ದು. ಐದು ಕಡೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಕಾರ್ಯಪಡೆ :ಮೈಸೂರು ಜಿಲ್ಲೆಯ ಬಂಡೀಪುರ ಹಾಗೂ ನಾಗರಹೊಳೆ ಈ ಎರಡು ಪ್ರದೇಶಗಳು ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಈ ಭಾಗದ ಕಾಡಾಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಈ ಆನೆ ಕಾರ್ಯಪಡೆ ಕೇಚೇರಿ ತೆರೆಯಲಾಗಿದ್ದು. ಇದಕ್ಕೆ ಡಿಸಿಎಫ್ ಸೀಮಾ ನೇತೃತ್ವದಲ್ಲಿ 32 ಮಂದಿ ಸಿಬ್ಬಂದಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಲಾಗಿದೆ.
ಈ ಆನೆ ಟಾಸ್ಕ್ ಫೋರ್ಸ್ ರಾತ್ರಿ ವೇಳೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಸಿಬ್ಬಂದಿ ಜೊತೆ ಗಸ್ತು ತಿರುಗುತ್ತದೆ. ಕಾಡಾನೆಗಳು ನಾಡಿಗೆ ಬಂದಾಗ ಪುನಃ ಅವುಗಳನ್ನು ಕಾಡಿಗೆ ಓಡಿಸುವ ಕೆಲಸ ಮಾಡಲಾಗಿದ್ದು, ಇಲ್ಲ ಎಂದರೆ ಕಾಡಾನೆಗಳನ್ನು ಸೆರೆ ಹಿಡಿದು ಪುನಃ ಕಾಡಿಗೆ ಬಿಡುವ ಕೆಲಸವನ್ನು ಮಾಡಲಾಗುವುದು. ಇದರಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಕಳೆದ ಎರಡು ತಿಂಗಳಿನಿಂದ ಸ್ವಲ್ಪ ಕಡಿಮೆಯಾಗಿದೆ ಎನ್ನುತ್ತಾರೆ ಆನೆ ಕಾರ್ಯಪಡೆಯ ಹುಣಸೂರು ವಿಭಾಗದ ಮುಖ್ಯಸ್ಥೆ ಡಿಸಿಎಫ್ ಸೀಮಾ.
ಆನೆ ಕಾರ್ಯಪಡೆಯ ಬೇಡಿಕೆಗಳೇನು;ಆನೆ ಕಾರ್ಯಪಡೆ ರಾಜ್ಯದ ಐದು ಕಡೆ ರಚನೆಯಾಗಿದ್ದು. ಇದಕ್ಕೆ ನಾಲ್ಕು ಪಡೆಗಳನ್ನು ನೇಮಿಸಲಾಗಿದೆ. ಈ ಪಡೆಗೆ ನೇಮಕಗೊಂಡ ಅಧಿಕಾರಿಗಳು ಕೆಲವರು ಅಧಿಕಾರ ಸ್ವೀಕರಿಸುತ್ತಿಲ್ಲ, ನುರಿತ ವೈದ್ಯರ ಕೊರತೆ, ವಾಹನಗಳ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಆನೆ ಕಾರ್ಯಪಡೆಗಿದ್ದು, ಈ ಬಾರಿ ರಾಜ್ಯ ಬಜೆಟ್ ನಲ್ಲಿ ವನ್ಯಜೀವಿ ನಿಯಂತ್ರಣಕ್ಕೆ ಹೆಚ್ಚಿನ ಅನುದಾನ ಕೋರಿದ್ದೇವೆ ಎಂದು ವನ್ಯಜೀವಿ ವಿಭಾಗದ ಎಪಿಸಿಸಿಎಫ್. ಕುಮಾರ್ ಪುಷ್ಕರ್ ಈಟಿವಿ ಭಾರತ್ ಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಸೋಲಾರ್ ಬೇಲಿ ಮುರಿದು ತೋಟಕ್ಕೆ ನುಗ್ಗಿದ ಆನೆ: ಸಿಸಿಟಿವಿ ದೃಶ್ಯ