ಮೈಸೂರು:ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆನೆ ಲಕ್ಷ್ಮಿ ಮೊನ್ನೆ ಗಂಡು ಮರಿಗೆ ಜನ್ಮ ನೀಡಿದ್ದು, ಅದಕ್ಕೆ ಶ್ರೀದತ್ತಾತ್ರೇಯ ಎಂದು ರಾಜಮಾತೆ ಪ್ರಮೋದ ದೇವಿ ಒಡೆಯರ್ ಅವರು ನಾಮಕರಣ ಮಾಡಿದ್ದಾರೆ.
ಅಭಿಮನ್ಯು ನೇತೃತ್ವದ ಗಜಪಡೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅರಮನೆಗೆ ಬಂದಿದ್ದು, ಅವುಗಳಲ್ಲಿ ಒಂದಾದ ಲಕ್ಷ್ಮೀ ಎಂಬ ಹೆಣ್ಣಾನೆ ಮೊನ್ನೆ ರಾತ್ರಿ ಅರಮನೆ ಅಂಗಳದಲ್ಲಿ ಗಂಡು ಮರಿಗೆ ಜನ್ಮ ನೀಡಿತ್ತು.