ಮೈಸೂರು:ಆಹಾರ ಅರಸಿ ನಾಡಿನೆಡೆಗೆ ಬರುತ್ತಿದ್ದ ಕಾಡಾನೆಯೊಂದು ರೈಲ್ವೆ ತಡೆಗೋಡೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಲೆಯೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ರೈಲ್ವೆ ತಡೆಗೋಡೆಗೆ ಸಿಲುಕಿ ಕಾಡಾನೆ ಸಾವು
ಕಾಡಿನಿಂದ ಆಹಾರ ಅರಸಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ರೈಲ್ವೆ ತಡೆಗೋಡೆಗೆ ಕಾಡಾನೆಯ ತಲೆ ಸಿಲುಕಿ ಸಾವನ್ನಪ್ಪಿದೆ ಎಂದು ಪಶು ವೈದ್ಯ ಡಾ. ನಾಗರಾಜ್ ತಿಳಿಸಿದ್ದಾರೆ.
ಕಾಡಾನೆ ಸಾವು
ಅರಣ್ಯ ಪ್ರದೇಶದ ಕೊಪ್ಪು ಹಾಡಿಯ ಬಳಿ ಕಾಡು ಪ್ರಾಣಿಗಳ ಹಾವಳಿಯಿಂದ ರೈಲ್ವೆ ಕಂಬಿಗಳನ್ನು ಹಾಕಲಾಗಿತ್ತು. ಈ ಸಂದರ್ಭ ಕಾಡಿನಿಂದ ಆಹಾರವನ್ನರಸಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ರೈಲ್ವೆ ತಡೆಗೋಡೆಗೆ ಕಾಡಾನೆಯ ತಲೆ ಸಿಲುಕಿ ಸಾವನ್ನಪ್ಪಿದೆ ಎಂದು ಪಶು ವೈದ್ಯ ಡಾ. ನಾಗರಾಜ್ ತಿಳಿಸಿದ್ದಾರೆ.
ಸಾವನಪ್ಪಿರುವ ಆನೆಗೆ ಸುಮಾರು 10ರಿಂದ 14 ವರ್ಷ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಆನೆಯ ಅಂತ್ಯಕ್ರಿಯೆ ನಡೆಸಲಾಯಿತು.