ಮೈಸೂರು:ದಕ್ಷಿಣ ಭಾರತದ 7 ರಾಜ್ಯಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ 5 ವರ್ಷಕ್ಕೊಮ್ಮೆ ನಡೆಯಲಿರುವ ಆನೆಗಳ ಗಣತಿ ಆರಂಭವಾಗಿದೆ. ಕರ್ನಾಟಕ ಅರಣ್ಯ ಇಲಾಖೆಯೂ ಈ ಆನೆಗಳ ಗಣತಿಯ ನೇತೃತ್ವ ವಹಿಸಿದ್ದು, ಕರ್ನಾಟಕದ ನಾಗರಹೊಳೆ - ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿಯೂ ಏಕಕಾಲಕ್ಕೆ ಆನೆಗಳ ಗಣತಿ ಆರಂಭವಾಗಿದೆ.
ದೇಶದಲ್ಲಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕ ಅರಣ್ಯ ಇಲಾಖೆಯ ಇಂದಿನಿಂದ ಮೂರು ದಿನಗಳ ಕಾಲ 5 ವರ್ಷಕ್ಕೊಮ್ಮೆ ನಡೆಯುವ ಆನೆ ಗಣತಿಯ ನೇತೃತ್ವ ವಹಿಸಿದೆ. ಕರ್ನಾಟಕದ ಜೊತೆಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಒಂದೇ ಅವಧಿಯಲ್ಲಿ ಏಕಕಾಲಕ್ಕೆ ಮೂರು ದಿನಗಳ ಕಾಲ ಆನೆಗಳ ಗಣತಿ ಆರಂಭವಾಗಿದೆ. ಕರ್ನಾಟಕದ ಆನೆಗಳು ದಕ್ಷಿಣ ಭಾರತದಲ್ಲಿ ಇರುವ ಮಹಾರಾಷ್ಟ್ರ, ಗೋವಾ ಕೇರಳ, ತಮಿಳುನಾಡು ಭಾಗಗಳಲ್ಲಿ ಓಡಾಡುವ ಕಾರಣದಿಂದ ಕರ್ನಾಟಕ ಅರಣ್ಯ ಇಲಾಖೆ ಆನೆಗಳ ಗಣತಿಯ ನೇತೃತ್ವ ವಹಿಸಿದೆ.
ರಾಜ್ಯವಾರು ಆನೆಗಳ ಸಂಖ್ಯೆ:ದೇಶದಲ್ಲಿಯೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಕರ್ನಾಟಕವಾಗಿದೆ. 2017 ರ ಆನೆ ಗಣತಿಯಲ್ಲಿ ಕರ್ನಾಟಕದಲ್ಲಿ 6049 ಆನೆಗಳಿದ್ದು, ಅಸ್ಸೋಂನಲ್ಲಿ 5,719 , ಕೇರಳದಲ್ಲಿ 3,504 ಆನೆಗಳಿದ್ದು. ಕರ್ನಾಟಕ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿದೆ.
ಈ ಬಾರಿ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಆನೆಗಳಿವೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳ, ಮಹಾರಾಷ್ಟ್ರ, ಗೋವಾ, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ ಎಷ್ಟೆಷ್ಟು ಆನೆಗಳಿವೆ ಎಂಬುದನ್ನು ಕಂಡುಹಿಡಿಯಲು, ಈ ಆನೆ ಗಣತಿ ಪ್ರಕ್ರಿಯೆ ಸಹಾಯಕವಾಗಲಿದೆ.