ಮೈಸೂರು:ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಸಂಪೂರ್ಣವಾಗಿ ಯಶಸ್ವಿಯಾದ ಹಿನ್ನೆಲೆ, ಕ್ಯಾಪ್ಟನ್ ಅಭಿಮನ್ಯುಗೆ ಮುತ್ತಿಟ್ಟು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಾವುತ ವಸಂತ ಭಾವುಕತೆಯಿಂದ ನಮಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಅರಮನೆ ಆವರಣದಲ್ಲಿ ತನ್ನ ಬಳಗದೊಂದಿಗೆ ಇದ್ದ ಕ್ಯಾಪ್ಟನ್ ಅಭಿಮನ್ಯುಗೆ ಬುಧವಾರ ನಡೆದ ಜಂಬೂಸವಾರಿ ಸವಾರಿ ಸವಾಲಾಗಿತ್ತು. ಎರಡು ವರ್ಷದ ನಂತರ ಅದ್ಧೂರಿಯಾಗಿ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಅಭಿಮನ್ಯು ಶಾಂತವಾಗಿ ಹಾಗೂ ಗಂಭೀರದಿಂದ ಹೆಜ್ಜೆ ಹಾಕಿ ಯಶಸ್ವಿಗೊಳಿಸಿದ್ದಾನೆ.