ಕರ್ನಾಟಕ

karnataka

ETV Bharat / state

ನಾಗರಹೊಳೆ ವ್ಯಾಪ್ತಿಯ ಜನರಿಗೆ ಆನೆ ಕಾಟ: ಒಂಟಿ ಸಲಗನ ಉಪಟಳದಿಂದ ಅಪಾರ ಹಾನಿ - elephant attack in Mysore

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ‌ ಗ್ರಾಮದಲ್ಲಿ ಆನೆ ಉಪಟಳ ಹೆಚ್ಚಾಗಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿರುವ ಘಟನೆ ಮೈಸೂರಿನ ಕಾಳಚೋಳನಹಳ್ಳಿ ಸಮೀಪ ನಡೆದಿದೆ.

elephant attack in Mysore
ಒಂಟಿ ಸಲಗನ ಅಬ್ಬರಕ್ಕೆ ಜನ ತತ್ತರ

By

Published : Jan 20, 2020, 12:31 PM IST

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ‌ ಗ್ರಾಮದಲ್ಲಿ ಆನೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿರುವ ಘಟನೆ ಜಿಲ್ಲೆಯ ಕಾಳಚೋಳನಹಳ್ಳಿಯಲ್ಲಿ ನಡೆದಿದೆ.

ಒಂಟಿ ಸಲಗನ ಅಬ್ಬರಕ್ಕೆ ಜನ ತತ್ತರ

ಭಾನುವಾರ ಬೆಳಗಿನ ವೇಳೆ ಕಾಳಚೋಳನಹಳ್ಳಿ ಗ್ರಾಮದ ರವೀಶ್​ ಎಂಬುವರ ಮನೆಗೆ ಹಾನಿ ಮಾಡಿದ್ದ ಆನೆಯನ್ನು ಜನರು ಓಡಿಸಿದ್ದರು. ಆದರೆ ಅಲ್ಲಿಂದ ಹೊಲಕ್ಕೆ ನುಗ್ಗಿದ ಆನೆ ಜೋಳದ ಬೆಳೆಗೆ ಹಾನಿ ಮಾಡಿದೆ. ರಾತ್ರಿ ಪೂರ್ತಿ ಹೊಲದಲ್ಲೇ ಕಾಲ ಕಳೆದ ಒಂಟಿ ಸಲಗ ಇಂದು ಬೆಳಗ್ಗೆ ಉಡುಪೆಪುರ ಗ್ರಾಮಕ್ಕೆ ಬಂದಿದೆ. ಅದೇ ದಾರಿಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ರವಿ ಎಂಬ ವ್ಯಕ್ತಿ ಆನೆಯನ್ನು ಕಂಡು ಬೈಕ್​​ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಅಲ್ಲಿದ್ದ ಬೈಕ್​ ಹಾಗೂ ಹುಲ್ಲಿನ ಮೆದೆಯನ್ನು ಆನೆ ಧ್ವಂಸಗೊಳಿಸಿದೆ.

ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗಿದ್ದರೂ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details