ಮೈಸೂರು:ನಾಡಹಬ್ಬ ಮೈಸೂರು ದಸರಾ ಚಾಲನೆಗೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ನಾಳೆಯಿಂದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ಚಿನ್ನದ ಅಂಬಾರಿಯಷ್ಟೇ ಭಾರ ಇರುವ ಮರದ ಅಂಬಾರಿಯನ್ನು ಹೊರಿಸಿ ಅಭ್ಯಾಸ ನಡೆಯಲಿದೆ.
ಮೈಸೂರು ದಸರಾ: ಅಭಿಮನ್ಯುಗೆ ನಾಳೆಯಿಂದ ಅಂಬಾರಿ ಹೊರುವ ತಾಲೀಮು - ಮೈಸೂರು
ಸರಳ ದಸರಾ ಮಹೋತ್ಸವ ಚಾಲನೆಗೆ ನಾಲ್ಕು ದಿನಗಳಷ್ಟೇ ಬಾಕಿ ಇದೆ. ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ನಾಳೆಯಿಂದ ಅಂಬಾರಿಯಷ್ಟೇ ಭಾರ ಇರುವ ಮರದ ಅಂಬಾರಿಯನ್ನು ಹೊರಿಸಿ ತಾಲೀಮು ನಡೆಯಲಿದೆ.
![ಮೈಸೂರು ದಸರಾ: ಅಭಿಮನ್ಯುಗೆ ನಾಳೆಯಿಂದ ಅಂಬಾರಿ ಹೊರುವ ತಾಲೀಮು ಅಂಬಾರಿ ಮರದ ತಾಲೀಮು](https://etvbharatimages.akamaized.net/etvbharat/prod-images/768-512-9155932-92-9155932-1602565791024.jpg)
ಅಂಬಾರಿ ಮರದ ತಾಲೀಮು
ಕೋವಿಡ್ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿಯೇ ದಸರಾ ಆನೆಗಳ ತಾಲೀಮು ನಡೆಯುತ್ತಿದ್ದು, ಪರ್ಯಾಯ ಆನೆಗಳಿಗೆ ಮರಳು ಮೂಟೆಗಳ ಭಾರ ಹೊರಿಸಲಾಗುತ್ತಿದೆ.
ಇಂದು ಗೋಪಿ ಆನೆಗೆ ಮರಳು ಮೂಟೆ ಭಾರ ಹೊರುವ ಟಾಸ್ಕ್ ನೀಡಲಾಗಿದೆ. ನಾಳೆಯಿಂದ ಆನೆಗಳಿಗೆ ಮರದ ಅಂಬಾರಿ ಹೊರುವ ಕೆಲಸವಿದೆ. ಅಭಿಮನ್ಯು ಸೇರಿ ಗೋಪಿ, ವಿಕ್ರಮ ಆನೆಗೂ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲಾಗುತ್ತದೆ.