ಕರ್ನಾಟಕ

karnataka

ETV Bharat / state

ದುರಸ್ತಿ ವೇಳೆ ವಿದ್ಯುತ್​ ಕಂಬದಿಂದ ಬಿದ್ದ ಮೂವರು ನೌಕರರಿಗೆ ಗಂಭೀರ ಗಾಯ - ಮೈಸೂರು ಲೇಟೆಸ್ಟ್​ ಅಪ್ಡೇಟ್​ ನ್ಯೂಸ್​

ವಿದ್ಯುತ್ ಕಂಬವೇರಿ‌ ಕೆಲಸ ನಿರ್ವಹಿಸುತ್ತಿರುವ ವೇಳೆ ಶಾಕ್ ಹೊಡೆದು ಮೂವರು ಚೆಸ್ಕಾಂ ನೌಕರರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ಈ ಘಟನೆ ನಡೆದಿದೆ.

electric shock: 3 employees seriously injured
ದುರಸ್ತಿ ವೇಳೆ ವಿದ್ಯುತ್​ ಕಂಬದಿಂದ ಬಿದ್ದು ಮೂವರು ನೌಕರರು ಗಂಭೀರ ಗಾಯ

By

Published : Nov 5, 2020, 9:38 AM IST

ಮೈಸೂರು: ವಿದ್ಯುತ್ ಕಂಬದಿಂದ ಬಿದ್ದು ಮೂವರು ನೌಕರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ನಡೆದಿದೆ.

ವಿದ್ಯುತ್​ ಕಂಬದಿಂದ ಬಿದ್ದು ಮೂವರು ನೌಕರರು ಗಂಭೀರ ಗಾಯ: ವಿಡಿಯೋ

ಬನ್ನೂರು ವಿಭಾಗೀಯ ಚೆಸ್ಕಾಂ ನೌಕರರಾದ ತ್ಯಾಗರಾಜು, ಮಹೇಂದ್ರ, ಮಲ್ಲೇಶ್ ಗಾಯಗೊಂಡವರು. ವಿದ್ಯುತ್ ಕಂಬವೇರಿ‌ ಕೆಲಸ ನಿರ್ವಹಿಸುತ್ತಿರುವ ವೇಳೆ ಬ್ಯಾಟರಿಯಿಂದ ರಿಟರ್ನ್ ಆಗಿ ವಿದ್ಯುತ್ ಶಾಕ್ ಹೊಡೆದಿದೆ ಎನ್ನಲಾಗ್ತಿದೆ. ಸದ್ಯ ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೌಕರರು ವಿದ್ಯುತ್ ಕಂಬದಿಂದ ಬೀಳುತ್ತಿರುವ ದೃಶ್ಯವನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.

ABOUT THE AUTHOR

...view details