ಮೈಸೂರು: ಗ್ರಾ.ಪಂ ಎರಡನೇ ಹಂತದ ಮತದಾನ ನಾಳೆ(ಡಿ.27) ನಡೆಯಲಿರುವ ಹಿನ್ನೆಲೆ ನಿಯೋಜಿಸಿದ ಮತಗಟ್ಟೆ ಕೇಂದ್ರಗಳಿಗೆ ಚುನಾವಣೆ ಸಿಬ್ಬಂದಿ ಸಜ್ಜಾಗಿದ್ದಾರೆ.
ಗ್ರಾ.ಪಂ ಚುನಾವಣೆ: ನಿಯೋಜಿಸಿದ ಸ್ಥಳಕ್ಕೆ ತೆರಳಲು ಸಜ್ಜಾದ ಚುನಾವಣೆ ಸಿಬ್ಬಂದಿ - ಗ್ರಾಮ ಪಂಚಾಯ್ತಿಗೆ 2ನೇ ಹಂತದ ಚುನಾವಣೆ
ಮೈಸೂರಿನಲ್ಲಿ ನಾಳೆ ಗ್ರಾಮ ಪಂಚಾಯ್ತಿ 2ನೇ ಹಂತದ ಚುನಾವಣೆ ಹಿನ್ನೆಲೆ ನಿಯೋಜಿಸಿದ ಸ್ಥಳಕ್ಕೆ ಚುನಾವಣಾ ಸಿಬ್ಬಂದಿ ತೆರಳುತ್ತಿದ್ದಾರೆ. ಮೈಸೂರು ತಾಲೂಕು, ತಿ.ನರಸೀಪುರ ಹಾಗೂ ನಂಜನಗೂಡು ತಾಲೂಕು ಸೇರಿದಂತೆ 102 ಗ್ರಾಪಂಗೆ ನಾಳೆ ಮತದಾನ ನಡೆಯಲಿದೆ.
ನಿಯೋಜಿಸಿದ ಸ್ಥಳಕ್ಕೆ ತೆರಳಲು ಸಜ್ಜಾದ ಚುನಾವಣೆ ಸಿಬ್ಬಂದಿ
ಮೈಸೂರು ತಾಲೂಕು, ತಿ.ನರಸೀಪುರ ಹಾಗೂ ನಂಜನಗೂಡು ತಾಲೂಕು ಸೇರಿದಂತೆ 102 ಗ್ರಾ.ಪಂಗೆ ನಾಳೆ ಮತದಾನ ನಡೆಯುವುದರಿಂದ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ 4,092 ಚುನಾವಣೆ ಸಿಬ್ಬಂದಿ ಮಸ್ಟರಿಂಗ್ ಕೇಂದ್ರಗಳಿಗೆ ಆಗಮಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ತೆರಳಿದರು.
ಮೈಸೂರು ತಾಲೂಕಿನ ಗ್ರಾಪಂ ಚುನಾವಣೆಯ ಮಸ್ಟರಿಂಗ್ ಕೇಂದ್ರವನ್ನಾಗಿ ಮಹಾರಾಣಿ ಕಾಲೇಜಿನ ಹೊಸ ಕಟ್ಟಡ ಆಯ್ಕೆ ಮಾಡಿಕೊಳ್ಳಲಾಗಿದೆ.