ಕರ್ನಾಟಕ

karnataka

ETV Bharat / state

ಚುನಾವಣಾ ಸಿಬ್ಬಂದಿಯಿಂದ ಸಿದ್ದರಾಮಯ್ಯ ಕಾರು ತಪಾಸಣೆ - ಮನುಗನಹಳ್ಳಿ ಚೆಕ್ ಪೊಸ್ಟ್ ಅಧಿಕಾರಿಗಳಿಂದ ತಪಾಸಣೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರ ಕಾರು ತಡೆದ ಚೆಕ್ ಪೋಸ್ಟ್‌ ಸಿಬ್ಬಂದಿ ತಪಾಸಣೆ ಮಾಡಿದರು.

ಸಿದ್ದರಾಮಯ್ಯ ಕಾರ್ ಚೆಕ್ ಮಾಡಿದ ಚುನಾವಣೆ ಸಿಬ್ಬಂದಿ

By

Published : Nov 20, 2019, 11:51 AM IST

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುತ್ತಿದ್ದ ಕಾರು ತಡೆದ ಚುನಾವಣೆ ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ಮಾಡಿದರು.

ಸಿದ್ದರಾಮಯ್ಯ ಕಾರ್ ಚೆಕ್ ಮಾಡಿದ ಚುನಾವಣೆ ಸಿಬ್ಬಂದಿ

ಬಿಳಿಕೆರೆ ಹೋಬಳಿ ಬಳಿಯ ಇರುವ ಮನುಗನಹಳ್ಳಿ ಚೆಕ್ ಪೋಸ್ಟ್​ನಲ್ಲಿ ಸಿದ್ದರಾಮಯ್ಯ ಅವರ ಕಾರು ತಡೆದಾಗ, "ಚೆಕ್ ಮಾಡ್ರಯ್ಯ ಬೇಗ, ಹುಡ್ಕೊಳ್ರಪ್ಪಾ ಹುಡ್ಕೊಳ್ಳಿ, ತಗೊಳ್ರಿ ಅದೇನೇನಿದೆ" ಅಂತಾ ತಮಾಷೆ ಮಾಡುತ್ತಲೇ ಚುನಾವಣಾಧಿಕಾರಿಗಳಿಗೆ ತಪಾಸಣೆಗೆ ಅನುವು ಮಾಡಿಕೊಟ್ಟರು. ಬಳಿಕ ನಿಮ್ಮ ಕರ್ತವ್ಯ ನೀವು ಮಾಡಿ ಎಂದು ಹೇಳಿ ಅಲ್ಲಿಂದ ಹೊರಟರು.

ಕಾರಿನಲ್ಲಿ ಸಿದ್ದರಾಮಯ್ಯ ಜೊತೆ ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕೂಡ ಇದ್ದರು. ಕಾರಿನ ಟ್ರಂಕ್‌ ತೆರೆಸಿ ಸಂಪೂರ್ಣ ಪರಿಶೀಲನೆ ನಡೆಸಲಾಯಿತು. ನಂತರ ಅದೇ ಮಾರ್ಗವಾಗಿ ಬಂದ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರ ಕಾರನ್ನೂ ಚುನಾವಣಾ ಸಿಬ್ಬಂದಿ ಪರಿಶೀಲನೆ ನಡೆಸಿದರು.

ABOUT THE AUTHOR

...view details