ಕರ್ನಾಟಕ

karnataka

ETV Bharat / state

ಯುಪಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮೈಸೂರಿನ ಮುಖ್ಯ ಪೇದೆ ಸಾವು - kannada news

ಉತ್ತರಪ್ರದೇಶದ ರಾಯ್ ಬರೇಲಿಯ ಉಂಚ್ ಹಾರ್​ನಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದ ಮೈಸೂರಿನ ಮುಖ್ಯ ಪೇದೆ ಆರ್.ಕೆ.ಪ್ರಕಾಶ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚುನಾವಣೆ ಕರ್ತವ್ಯ ನಿರತ ಮುಖ್ಯಪೇದೆ ಸಾವು

By

Published : May 4, 2019, 9:49 PM IST

ಮೈಸೂರು:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶಕ್ಕೆ ತೆರಳಿದ್ದ ಮೈಸೂರಿನ ಮುಖ್ಯ ಪೇದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚುನಾವಣಾ ಕಾರ್ಯ ನಿಮಿತ್ತವಾಗಿ ಉತ್ತರಪ್ರದೇಶದ ರಾಯ್​ ಬರೇಲಿಯ ಉಂಚ್ ಹಾರ್​ನಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದ ಸಿ.ಐ.ಎಸ್.ಎಫ್. ಮುಖ್ಯ ಪೇದೆ ಆರ್.ಕೆ.ಪ್ರಕಾಶ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಂಜುನಾಥ ಬಡಾವಣೆ ನಿವಾಸಿಯಾದ ಪ್ರಕಾಶ್ ಆರ್​ಬಿಐನಲ್ಲಿ ಮುಖ್ಯ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶಕ್ಕೆ ಕಳುಹಿಸಲಾಗಿತ್ತು.

ಪ್ರಕಾಶ್ ಹುಟ್ಟೂರಾದ ಪಿರಿಯಾಪಟ್ಟಣ ತಾಲೂಕಿನ ರಾಮನಾಥತುಂಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ABOUT THE AUTHOR

...view details