ಕರ್ನಾಟಕ

karnataka

ETV Bharat / state

ದರ್ಶನ್​ ನಿವಾಸದ ಮೇಲೆ ನಡೆಯಿತಾ ದಾಳಿ?: ಯಾರೂ ಬಂದಿಲ್ಲ ಎಂದ ದರ್ಶನ್​ ತಾಯಿ - undefined

ನಟ ದರ್ಶನ್ ಅವರ ಟಿ.‌ನರಸಿಪುರದಲ್ಲಿರುವ ದರ್ಶನ್ ಫಾರ್ಮ್​ ಹೌಸ್ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆ ಸುದ್ದಿ ಹರಿದಾಡಿದೆ. ಆದರೆ ಅವರ ತಾಯಿ ಮಾತ್ರ ಯಾರೂ ಬಂದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ನಟ ದರ್ಶನ್

By

Published : Apr 15, 2019, 2:41 PM IST

ಮೈಸೂರು:ನಟ ದರ್ಶನ್ ಅವರ ಟಿ.‌ನರಸಿಪುರದಲ್ಲಿರುವ ದರ್ಶನ್ ಫಾರ್ಮ್​ ಹೌಸ್ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ದರ್ಶನ್​ ತಾಯಿ ಸ್ಪಷ್ಟನೆ ನೀಡಿದ್ದು, ಫಾರ್ಮ್​ ಹೌಸ್​ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದಿದ್ದಾರೆ.

ಮೈಸೂರು ಜಿಲ್ಲೆಯ ಟಿ.ನರಸಿಪುರ ರಸ್ತೆಯಲ್ಲಿರುವ ನಟ ದರ್ಶನ್ ತೂಗೂದೀಪ್​ ಅವರ ಫಾರ್ಮ್​ ಹೌಸ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಐಟಿ ಇಲಾಖೆ ಅಧಿಕಾರಿಗಳ ಜತೆ ಆಗಮಿಸಿ ತಪಾಸಣೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಈ ಫಾರ್ಮ್​ ಹೌಸ್ ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುತ್ತದೆ ಎಂದೂ ಹೇಳಲಾಗುತ್ತಿದೆ. ನಟ ದರ್ಶನ್ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಈ ಟಿವಿ ಭಾರತದ ಜೊತೆ ಫೋನ್​ನಲ್ಲಿ ಮಾತನಾಡಿದ ನಟ ದರ್ಶನ್ ತಾಯಿ ಮೀನಾ ತೂಗುದೀಪ್, ನಮ್ಮ ಫಾರ್ಮ್​ ಹೌಸ್​ನಲ್ಲಿ ಯಾವುದೇ ಐಟಿ ದಾಳಿ ನಡೆದಿಲ್ಲ. ಹಾಗೊಮ್ಮೆ ನಡೆದಿದೆ ಎಂದು ನೀವು ನಂಬುವುದಾದರೆ ಅಲ್ಲಿ ಸಿಗುವುದು ಕೇವಲ ಹಸು - ಕರು, ಕುದುರೆಗಳು ಸಿಗುತ್ತವಷ್ಟೇ ಎಂದು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details