ಮೈಸೂರು:ಗ್ರಾಹಕರಿಗೆ ನೀಡುವ ಬಿಲ್ನಲ್ಲಿಯೂ ಕಡ್ಡಾಯ ಮತದಾನ ಮಾಡುವಂತೆ ಕಳೆದ 25 ವರ್ಷಗಳಿಂದಲೂ ಜಾಗೃತಿ ಮೂಡಿಸುತ್ತಿರುವ ಹೋಟೆಲೊಂದು ಮೈಸೂರಿನಲ್ಲಿದೆ.
ಹೊಟ್ಟೆತುಂಬ ತಿನ್ನಿ.. ಆದರೆ ಮತದಾನ ಮಾಡೋದು ಮರೆಯಬೇಡಿ.. - Election awareness
ಹೋಟೆಲ್ಗೆ ಬರುವ ಗ್ರಾಹಕರಿಗೆ ನೀಡುವ ಬಿಲ್ನ ಕೆಳಭಾಗದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ನಮೂದಿಸುವ ಮೂಲಕ ಮತದಾನ ಜಾಗೃತಿ ಮೂಡಿಸುವ ಕೆಲಸವನ್ನು ಮೈಸೂರಿನ ಅಪೂರ್ವ ಹೋಟೆಲ್ ಮಾಡಿದೆ.
ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಸರ್ಕಾರ ಹಾಗೂ ಸ್ವಯಂ ಸೇವಾಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಆದರೆ, ಮೈಸೂರಿನ ಜೆ.ಎಲ್.ಬಿ ರಸ್ತೆಯ ಅಪೂರ್ವ ಹೋಟೆಲೊಂದು ಕಳೆದ 35 ವರ್ಷಗಳಿಂದ ಚುನಾವಣೆಗಳಲ್ಲಿ ಕಡ್ಡಾಯ ಮತದಾನದ ಬಗ್ಗೆ ತಮ್ಮಲ್ಲಿ ಬರುವ ಗ್ರಾಹಕರಿಗೆ ಅರಿವು ಮೂಡಿಸಿದೆ.
ಹೋಟಿಲ್ ಬಿಲ್ನ ಕೆಳಭಾಗದಲ್ಲಿ 'ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ' ಎಂದು ನಮೂದಿಸಲಾಗಿದ್ದು, ಬಿಲ್ ಕೊಡುವಾಗ ಯಾವ ಪಕ್ಷಕ್ಕಾದರೂ ಸರಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮಾಲೀಕರು ಹೇಳುವ ಮೂಲಕ ವಿಶಿಷ್ಟ ರೀತಿಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.