ಕರ್ನಾಟಕ

karnataka

ETV Bharat / state

ವಾಹನ ಸೌಲಭ್ಯವಿಲ್ಲದೆ ಮನೆಯಲ್ಲಿಯೇ ಕುಳಿತ ವಿದ್ಯಾರ್ಥಿನಿ: ಶಿಕ್ಷಣಾಧಿಕಾರಿಗಳ ಸಹಾಯಹಸ್ತ - ಮೈಸೂರು

ವಾಹನ ಸೌಲಭ್ಯವಿಲ್ಲದಿರುವುದರಿಂದ ಎಸ್​ಎಸ್ಎಲ್​ಸಿ ಪರೀಕ್ಷೆಗೆ ಬರುವುದಿಲ್ಲ ಎಂದು ಮನೆಯಲ್ಲೆ ಇದ್ದ ಮೈಸೂರಿನ ಡಿ.ಬನುಮಯ್ಯ ಶಾಲೆಯ ವಿದ್ಯಾರ್ಥಿಗೆ ಶಿಕ್ಷಣ ಅಧಿಕಾರಿಗಳು ವಾಹನದ ವ್ಯವಸ್ಥೆ ಮಾಡಿದ್ದಾರೆ.

Mysore
ಶಿಕ್ಷಣಾಧಿಕಾರಿಗಳ ಸಹಾಯದಿಂದ ಪರೀಕ್ಷೆಗೆ ಬಂದ ವಿದ್ಯಾರ್ಥಿನಿ

By

Published : Jun 27, 2020, 1:46 PM IST

ಮೈಸೂರು: ವಾಹನ ಸೌಲಭ್ಯವಿಲ್ಲದಿರುವುದರಿಂದ ಎಸ್​ಎಸ್ಎಲ್​ಸಿ ಪರೀಕ್ಷೆಗೆ ಬರುವುದಿಲ್ಲ ಎಂದು ಮನೆಯಲ್ಲಿಯೇ ಇದ್ದ ವಿದ್ಯಾರ್ಥಿಗೆ ಶಿಕ್ಷಣ ಅಧಿಕಾರಿಗಳು ವಾಹನದ ವ್ಯವಸ್ಥೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಶಿಕ್ಷಣಾಧಿಕಾರಿಗಳ ಸಹಾಯದಿಂದ ಪರೀಕ್ಷೆಗೆ ಬಂದ ವಿದ್ಯಾರ್ಥಿನಿ
ಮೈಸೂರಿನ ಡಿ.ಬನುಮಯ್ಯ ಶಾಲೆಯ ಸಂಗೀತ ಎಂಬ ವಿದ್ಯಾರ್ಥಿನಿ ಮೊದಲ ದಿನ ಪರೀಕ್ಷೆ ಬರೆದು ಶ್ರೀರಂಗ ಪಟ್ಟಣದ ಬಳಿ ಇರುವ ಹಂಪಾಪುರ ಎಂಬ ಗ್ರಾಮಕ್ಕೆ ಹೋಗಿದ್ದರು. ಇಂದು ಗಣಿತ ಪರೀಕ್ಷೆ ಬರೆಯಲು ಬರಲು ತಮ್ಮ ಹಳ್ಳಿಯಿಂದ ಬಸ್ ಇಲ್ಲ ಎಂದು ತಮ್ಮ ಸಹಪಾಠಿಗಳಿಗೆ ತಿಳಿಸಿದ್ದಳು. ವಿಷಯ ತಿಳಿದ ವಿದ್ಯಾರ್ಥಿಗಳು ಈ ವಿಚಾರವನ್ನು ಶಿಕ್ಷಣ ಅಧಿಕಾರಿಗಳಿಗೆ ತಿಳಿಸಿದರು.

ತಕ್ಷಣ ದಕ್ಷಿಣ ವಲಯ ಬಿಈಓ ಕಚೇರಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಕಂಠ ಶಾಸ್ತ್ರಿ ಅವರು ವಿದ್ಯಾರ್ಥಿನಿಯನ್ನು ಕರೆದುಕೊಂಡು ಬರಲು ಶಾಲಾ ವಾಹನ ವ್ಯವಸ್ಥೆ ಮಾಡಿಸಿದರು. ಪರೀಕ್ಷಾ ಸಮಯಕ್ಕೆ ವಿದ್ಯಾರ್ಥಿಯನ್ನು ಕರೆದುಕೊಂಡು ಬಂದು ಧೈರ್ಯ ಹೇಳಿ ಪರೀಕ್ಷಾ ಕೊಠಡಿಗೆ ಕಳುಹಿಸಿದರು.

ABOUT THE AUTHOR

...view details