ಮೈಸೂರು :ನಾವು ಪಠ್ಯಪುಸ್ತಕವನ್ನು ಕೇಸರಿಮಯ ಮಾಡುತ್ತಿಲ್ಲ. ನಾವು ಕನ್ನಡಕ ಹಾಕಿ ನೋಡುತ್ತಿದ್ದೇವೆ. ನಮಗೆ ಯಾವ ಬಣ್ಣವೂ ಕಾಣುತ್ತಿಲ್ಲ. ನಮಗೆ ಕಾಣುತ್ತಿರುವುದು ಮಕ್ಕಳಷ್ಟೇ.. ಮಕ್ಕಳ ಹಿತದೃಷ್ಟಿಯಿಂದ ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಕ್ಕಳ ಹಿತದೃಷ್ಟಿಯಿಂದ ನಾವು ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿದ್ದೇವೆ. ಅದಕ್ಕೆ ಹಸಿರು ಬಣ್ಣದ ವೋಟು ನಮಗೆ ಬೀಳುವುದಿಲ್ಲ ಎಂದು ಸಿದ್ದರಾಮಯ್ಯ ವಿರೋಧ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುವೆಂಪು ಅವರಿಗೆ ಅವಮಾನ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ
ಕಾಂಗ್ರೆಸ್ ಪಕ್ಷದವರು ಸುಳ್ಳನ್ನ ಹಬ್ಬಿಸುತ್ತಿದ್ದಾರೆ. ಟಿಪ್ಪು, ನಾರಾಯಣ ಗುರು, ಭಗತ್ ಸಿಂಗ್, ಬಸವಣ್ಣ ಅವರ ಮೇಲೆ ಸುಳ್ಳು ಹಬ್ಬಿಸಿದ್ದರು. ಆ ಸುಳ್ಳುಗಳು ಫೇಲ್ ಆದ ಮೇಲೆ ಈಗ ಕುವೆಂಪು ಅವರನ್ನು ಹಿಡಿದುಕೊಂಡಿದ್ದಾರೆ. ಸಿದ್ದರಾಮಯ್ಯ ಕುವೆಂಪು ಅವರ ನಾಲ್ಕು ಪಾಠವನ್ನು ಕೈ ಬಿಟ್ಟಿದ್ದರು. ನಾವು ಅದನ್ನು ಸೇರಿಸುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.
ಪಠ್ಯಪುಸ್ತಕವನ್ನು ಮೊದಲು ಸಿದ್ದರಾಮಯ್ಯ ಓದಲಿ. ಸಿದ್ದರಾಮಯ್ಯ ಎಲ್ಲಾ ವಿಚಾರಗಳಲ್ಲಿ ಮಿಸ್ಫೈರ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ನಾನೊಬ್ಬನೇ ಬುದ್ಧಿವಂತ ಅನ್ನೋದನ್ನ ಬಿಡಬೇಕು. ಅದು ಅವರ ದುರಹಂಕಾರವನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಶಿಕ್ಷಣ ಇಲಾಖೆಯನ್ನು ಮತಬ್ಯಾಂಕ್ ಮಾಡಿತ್ತು