ಕರ್ನಾಟಕ

karnataka

ETV Bharat / state

ಪರಿಸರಸ್ನೇಹಿ ಬ್ಯಾಗ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ DFRL - ಬಯೋ ಟ್ರೀಟ್ಮೆಂಟ್ ಪ್ಲಾಂಟ್

DFRL ಮತ್ತು DRDO ಹೊಸ ಪರಿಸರ ಸ್ನೇಹಿ ಬ್ಯಾಗ್ ಅನ್ನು ಸಂಶೋಧನೆ ಮಾಡಿದೆ. ಇದು ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಪರಿಸರ ಸ್ನೇಹಿ ಬ್ಯಾಗ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ DFRL
ಪರಿಸರ ಸ್ನೇಹಿ ಬ್ಯಾಗ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ DFRL

By

Published : Dec 8, 2022, 5:08 PM IST

ಮೈಸೂರು: ಪ್ಲಾಸ್ಟಿಕ್ ಸಮಸ್ಯೆಗೆ ಪರ್ಯಾಯವಾಗಿ ಪರಿಸರಸ್ನೇಹಿ ಬ್ಯಾಗ್​ಗಳ ಉತ್ಪಾದನೆ ತಂತ್ರಜ್ಞಾನವನ್ನು DFRL (ಡಿಫೆನ್ಸ್​ ಫುಡ್​ ರಿಸರ್ಚ್​ ಲ್ಯಾಬೋರೇಟರಿ) ಕಂಡುಹಿಡಿದಿದ್ದು, ಇದರ ಬಳಕೆಯ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದರು. ಈ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಉಪಯೋಗವಾಗಲೆಂದು ಬಿಡುಗಡೆ ಮಾಡಲಾಯಿತು.

ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್ ಸಂತೋಷ್ ಕುಮಾರ್ ಅವರು ಮಾತನಾಡಿದರು

DFRL ನ ಈ ತಂತ್ರಜ್ಞಾನದಿಂದ ಪರಿಸರಸ್ನೇಹಿ ಬ್ಯಾಗ್, ಸ್ಟ್ರಾ, ಬೌಲ್‌ಗಳು, ಪ್ಲೇಟ್‌ ಇತ್ಯಾದಿಗಳನ್ನು ಉತ್ಪಾದಿಸುತ್ತಿದ್ದು, ಬಳಸಿದ ನಂತರ 180 ದಿನಗಳಲ್ಲಿ ಸ್ವಾಭಾವಿಕವಾಗಿ ವಾತಾವರಣದಲ್ಲಿ ಕರಗುತ್ತವೆ. ಇಲ್ಲದಿದ್ದರೆ ಬಯೋ ಟ್ರೀಟ್ಮೆಂಟ್ ಪ್ಲಾಂಟ್​ನಲ್ಲಿ ಹಾಕಿದರೆ 45 ರಿಂದ 60 ದಿನಗಳಲ್ಲಿ ಕೊಳೆಯುತ್ತದೆ. ನೂತನ ತಂತ್ರಜ್ಞಾನದಲ್ಲಿ ಬಯೋ ಡಿಗ್ರೆಡಬಲ್ 5 ಕೆಜಿ ಕ್ಯಾರಿ ಬ್ಯಾಗ್ ತಯಾರಿಸಲಾಗಿದೆ. ಇದು ಜನಸಾಮಾನ್ಯರ ದಿನನಿತ್ಯದ ಬಳಕೆ ಹಾಗೂ ರೈತರಿಗೆ ಅನುಕೂಲ ಆಗುತ್ತದೆ. ಇದು ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿದ್ದು ಉಪಯುಕ್ತ ಎನ್ನುತ್ತಾರೆ ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್ ಸಂತೋಷ್ ಕುಮಾರ್.

ಇದನ್ನೂ ಓದಿ:ಮೈಸೂರಿನ ಡಿಎಫ್​ಆರ್​ಎಲ್​ ಸಂಸ್ಥೆಯಿಂದ ಪರಿಸರಸ್ನೇಹಿ ಪ್ಲಾಸ್ಟಿಕ್ ಬ್ಯಾಗ್ ಸಂಶೋಧನೆ

ABOUT THE AUTHOR

...view details