ಮೈಸೂರು: ಎಲ್ಲೆಡೆ ಕೊರೊನಾ ಅಬ್ಬರದಿಂದ ಆಸ್ಪತ್ರೆಗಳಿಗೆ ತೆರಳಲು ಜನರು ಆತಂಕ ಪಡುತ್ತಿರುವ ಬೆನ್ನಲ್ಲೇ, 'ಇ-ಸಂಜೀವಿನಿ' ಮೂಲಕ ಜೀವ ತುಂಬಲು ಸರ್ಕಾರ ಮುಂದಾಗಿದೆ.
ರಾಜ್ಯದೆಲ್ಲೆಡೆ ಕೊರೊನಾ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಜನ ವಸತಿ ಪ್ರದೇಶದ ರಸ್ತೆಗಳಲ್ಲಿ ಕೊರೊನಾ ರೋಗಿ ಸಿಗುವಂತಾಗಿದೆ. ಕೆಮ್ಮು, ನಗಡಿ, ಜ್ವರ ಕಾಣಿಸಿಕೊಂಡರೆ ಯಾವ ಆಸ್ಪತ್ರೆಗಳಿಗೆ ಭೇಟಿ ಕೊಡಬೇಕು? ಎಲ್ಲೆಲ್ಲಿ ಅಲೆಯ ಬೇಕು? ಎಂಬ ಚಿಂತೆ ಕಾಡತೊಡಗುತ್ತದೆ. ರೋಗಿ ಅಷ್ಟೇ ಅಲ್ಲದೇ ರೋಗಿಯ ಸಂಬಂಧಿಗಳು ಭಯ ಆವರಿಸಿಕೊಳ್ಳುತ್ತದೆ.
ಕೊರೊನಾಕ್ಕೆ ಹೆದರದೇ ಜನರು ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅಲ್ಲದೇ ವೈದ್ಯರು ಹಾಗೂ ವೈದ್ಯಕೀಯ ಸಲಹೆಯನ್ನು ಮತ್ತಷ್ಟು ಹತ್ತಿರವಾಗಿಸಲು 'ಇ-ಸಂಜೀವಿನಿ' ಆ್ಯಪ್ ಈಗ ಹೊಸ ಸೇರ್ಪಡೆಯಾಗಿದೆ.
ಗೂಗಲ್ ಅಥವಾ ಪ್ಲೇ ಸ್ಟೋರ್ ನಲ್ಲಿ 'ಇ-ಸಂಜೀವಿನಿ' ಆ್ಯಪ್ ಡೌನ್ ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಂಡರೇ ವೈದ್ಯರೇ ರೋಗಿಗಳಿಗೆ ವಿಡಿಯೋ ಕಾಲ್ ಮಾಡಿ, ರೋಗಿಯ ಮಾಹಿತಿ ಪಡೆದು ಔಷಧಿ ಹೆಸರನ್ನು ವಾಟ್ಸಪ್ ನಲ್ಲಿ ತಿಳಿಸುತ್ತಾರೆ. ಇದರಿಂದ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಲಿದೆ. ಅಲ್ಲದೇ ಬಸ್ ಚಾಜ್೯ ಕೂಡ ಉಳಿಯಲಿದೆ.
'ಇ-ಸಂಜೀವಿನಿ' ಆ್ಯಪ್ ಡೌನ್ ಲೋಡ್ ಮಾಡಿಕೊಂಡರೇ ವೈದ್ಯರ ಸಲಹೆ ಸಿಗಲಿದೆ. ಜೊತೆಗೆ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಲಿದೆ.