ಮೈಸೂರು: ಸಂಭ್ರಮದ ಚಾಮುಂಡೇಶ್ವರಿ ಮಹಾ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಅವರು ಇಂದು ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಿದ್ರು.
ನವರಾತ್ರಿ ಮುಕ್ತಾಯವಾದ 5ನೇ ದಿನ ಶುಭ ತುಲಾ ಲಗ್ನದಲ್ಲಿ ಬೆಳಗ್ಗೆ 6:48 ರಿಂದ 7:18ರ ವರೆಗಿನ ಶುಭ ಲಗ್ನದಲ್ಲಿ ಚಾಮುಂಡೇಶ್ವರಿಯ ಮಹಾ ರಥೋತ್ಸವ ಜರುಗಿತ್ತು.
ಇಂದು ಬೆಳಗ್ಗೆ 5 ಗಂಟೆಗೆ ಅಮ್ಮನವರ ಮೂಲ ವಿಗ್ರಹಕ್ಕೆ ಧಾರ್ಮಿಕ ವಿಧಿ ವಿಧಾನಗಳ ಬಳಿಕ ನಂತರ ಉತ್ಸವ ಮೂರ್ತಿಗೆ ಮಹಾ ಮಂಗಳಾರತಿ ಆದ ಮೇಲೆ ರಥದ ಮೇಲೆ ಉತ್ಸವ ಮೂರ್ತಿಯನ್ನು ಕೂರಿಸಿ ರಾಜವಂಶಸ್ಥರಿಗೆ ಮಹಾಮಂಗಳಾರತಿ ನೀಡಿದ ನಂತರ ಸ್ವತಃ ಯದುವೀರ್ ರಥದ ಹಗ್ಗವನ್ನು ಎಳೆಯುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.