ಮೈಸೂರು: ಪ್ರವಾಹದಿಂದ ನಾಡಹಬ್ಬ ದಸರಾಕ್ಕೆ ತೊಂದರೆಯಾಗುವುದಿಲ್ಲ. ದಸರಾ ವಿಜೃಂಭಣೆಯಿಂದ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರವಾಹದಿಂದ ದಸರೆಗೆ ತೊಂದರೆಯಿಲ್ಲ, ಈ ಬಾರಿ ವಿಜೃಂಭಣೆಯ ನಾಡಹಬ್ಬ: ಬಿಎಸ್ವೈ - ಕರ್ನಾಟಕ ಪ್ರವಾಹ
ರಾಜ್ಯದಲ್ಲಿ ಪ್ರವಾಹ ಇದೆಯೆಂದು ದಸರಾ ಸರಳವಾಗಿ ಆಚರಣೆಯಾಗುವುದಿಲ್ಲ, ವಿಜೃಂಭಣೆಯಿಂದಲೇ ದಸರಾ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರವಾಹದಿಂದ ಸರಳ ದಸರಾ ಆಚರಣೆಯಾಗುವುದಿಲ್ಲ. ವಿಜೃಂಭಣೆಯಿಂದಲೇ ದಸರಾ ಮಾಡುತ್ತೇವೆ ಎಂದು ಹೇಳಿದರು.
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ತಾತ್ಕಾಲಿಕ ವ್ಯವಸ್ಥೆ ಮಾಡಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಹಾಗೂ ರಾಜ್ಯದಿಂದ ಪ್ರವಾಹ ಪೀಡಿತರಿಗೆ ಪರಿಹಾರ ನೀಡಲಾಗುವುದು. ಈ ಬಗ್ಗೆ ಕೇಂದ್ರಕ್ಕೆ ಈಗಾಗಲೇ ಮನವರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.