ಕರ್ನಾಟಕ

karnataka

ETV Bharat / state

ಮೈಸೂರು ದಸರಾ: ಏರ್ ಶೋಗೆ ಕೇಂದ್ರ ಸರ್ಕಾರದ ಅನುಮತಿ.. ಸ್ಧಳ ಪರಿಶೀಲನೆ

Mysore Dasara: ಮೈಸೂರು ದಸರಾ ಇನ್ನೇನು ಕೆಲವೇ ದಿನದಲ್ಲಿ ಪ್ರಾರಂಭವಾಗಲಿದ್ದು, ಹಬ್ಬದ ಸಂದರ್ಭದಲ್ಲಿ ಏರ್‌ ಶೋ ಆಯೋಜನೆ ಸಂಬಂಧ ಅಧಿಕಾರಿಗಳು ಸ್ಧಳ ಪರಿಶೀಲನೆ ನಡೆಸಿದ್ದಾರೆ.

By ETV Bharat Karnataka Team

Published : Oct 6, 2023, 1:38 PM IST

Updated : Oct 6, 2023, 11:02 PM IST

dussehra-air-show-sanctioned-by-central-government
ಮೈಸೂರು ದಸರಾ: ದಸರಾ ಏರ್ ಶೋಗೆ ಕೇಂದ್ರ ಸರ್ಕಾರದ ಅನುಮತಿ.. ಸ್ಧಳ ಪರಿಶೀಲನೆ

ಮೈಸೂರು :ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜನರನ್ನು ಆಕರ್ಷಿಸುವ ಏರ್‌ ಶೋ ಆಯೋಜನೆಗೆ ಅನುಮತಿ ನೀಡುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಕೋರಿದ್ದರು. ಈ ಸಂಬಂಧ ಏರ್ ಶೋ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ. ರಾಜೇಂದ್ರ ಅವರು ಬನ್ನಿಮಂಟಪದ ಮೈದಾನಕ್ಕೆ ಭೇಟಿ ನೀಡಿ ಸ್ಧಳ ಹಾಗೂ ಏರ್ ಶೋ ನಡೆಸಲು ಬೇಕಾದ ರೂಪುರೇಷೆಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮೈಸೂರು ಏರ್ ಬೇಸ್ಡ್ ಗ್ರೂಪ್ ಕ್ಯಾಪ್ಟನ್ ಡಿ.ಕೆ.ಹೋಜಾ ಅವರೊಂದಿಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಏರ್ ಶೋ ನಡೆಸುವ ಸ್ಧಳ ದಿನಾಂಕ ಹಾಗೂ ಸಮಯ ಕುರಿತು ಚರ್ಚೆ ನಡೆಸಿದರು.

ಅಕ್ಟೋಬರ್ 15 ರಿಂದ 24 ರವರೆಗೆ ಜರುಗುವ ಹತ್ತು ದಿನಗಳ ನವರಾತ್ರಿ ಮಹೋತ್ಸವದ ನಡೆಸಲು ಸಕಲ ಸಿದ್ಧತೆ ನಡೆದಿದೆ. ಮಹೋತ್ಸವದ ಅಂಗವಾಗಿ ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರಲ್ಲಿ ಅಕ್ಟೋಬರ್​​ 6 ರಿಂದ 13ರ ವರೆಗೆ ಯುವ ಸಂಭ್ರಮ ಆಯೋಜಿಸಲಾಗಿದೆ. ಯುವ ಸಂಭ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳು ಮತ್ತು ರಾಜ್ಯದ ಇತರೆ ವಿವಿಗಳ ಕಾಲೇಜುಗಳು ಸೇರಿದಂತೆ ಒಟ್ಟು 400ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಲಿವೆ. ಮೈಸೂರಿನಿಂದಲೇ 250 ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಪ್ರತಿದಿನ 20 ತಂಡಗಳು ಪ್ರದರ್ಶನ ನೀಡಲಿವೆ. ಪ್ರತಿ ತಂಡಕ್ಕೆ 7-10 ನಿಮಿಷಗಳ ಕಾಲಾವಕಾಶ ಇರಲಿದೆ. ಪ್ರತಿ ತಂಡದಲ್ಲಿ 30 ರಿಂದ 40 ಕಲಾವಿದರಿಗೆ ಅವಕಾಶ ನೀಡಲಾಗಿದೆ. 8 ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ ದೀಪಾಲಂಕಾರ:ದಸರಾವನ್ನು ದಸರಾ ಸಂದರ್ಭದಲ್ಲಿ ನಗರದ 135 ಕಿ. ಮೀ ವ್ಯಾಪ್ತಿಯ ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಸರ್ಕಾರಿ ಪಾರಂಪರಿಕ ಕಟ್ಟಡಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು, ಸೋಮನಾಥೇಶ್ವರ ದೇವಾಲಯ ಹಾಗೂ ಚಂದ್ರಯಾನ 3 ಮಾದರಿಗಳು ದೀಪಾಲಂಕಾರದಲ್ಲಿ ಮಿಂಚಲಿವೆ.

ಪ್ರಮುಖ ರಸ್ತೆಯುದ್ದಕ್ಕೂ ದೀಪಾಲಂಕಾರ ಮಾಡಲಾಗುತ್ತಿದೆ. ಮೈಸೂರಿನ ಹೊರವಲಯದ ಪ್ರಮುಖ ಹೆದ್ದಾರಿಗಳನ್ನು ಒಳಗೊಂಡಂತೆ ನಗರದ ಜೆ. ಎಲ್. ಬಿ ರಸ್ತೆ, ಇರ್ವಿನ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಅಲ್ಬರ್ಟ್ ವಿಕ್ಟಾರ್ ರೋಡ್, ಸೈಯಾಜಿ ರಾವ್ ರಸ್ತೆ, ಬಿ. ಏನ್ ರಸ್ತೆ, ಅರಸು ರಸ್ತೆ ಸೇರಿದಂತೆ ಅರಮನೆ ಸುತ್ತಮುತ್ತ ಹಾಗೂ ನಗರದ 119 ವೃತ್ತಗಳಲ್ಲ ದೀಪಾಲಂಕಾರ ಇರಲಿದೆ.

ಇದನ್ನೂ ಓದಿ:ಕಂಪನಿ, ಉದ್ಯಮಿಗಳು ಪ್ರಾಯೋಜಕತ್ವ ವಹಿಸಿ ದಸರಾ ಯಶಸ್ಸಿನಲ್ಲಿ ಕೈಜೋಡಿಸಿ: ಮೈಸೂರು ಜಿಲ್ಲಾಧಿಕಾರಿ ಮನವಿ

Last Updated : Oct 6, 2023, 11:02 PM IST

For All Latest Updates

ABOUT THE AUTHOR

...view details