ಕರ್ನಾಟಕ

karnataka

ETV Bharat / state

ನವರಾತ್ರಿಯ ಎಂಟನೇ ದಿನ ಅರಮನೆಯ ಖಾಸಗಿ ದರ್ಬಾರ್​ನಲ್ಲಿ ದುರ್ಗಾ ಪೂಜೆ - Mysore Palace

ನವರಾತ್ರಿ ಹಿನ್ನೆಲೆ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್​ನಲ್ಲಿ ವಿಶೇಷವಾಗಿ ಕೆಲವೇ ಜನರ ಸಮ್ಮುಖದಲ್ಲಿ ದುರ್ಗಾ ಪೂಜೆ ನೆರವೇರಿಸಲಾಗಿದೆ.

dfs
ಖಾಸಗಿ ದರ್ಬಾರ್​ನಲ್ಲಿ ದುರ್ಗಾಪೂಜೆ

By

Published : Oct 24, 2020, 12:20 PM IST

ಮೈಸೂರು: ನವರಾತ್ರಿಯ ಎಂಟನೇ ದಿನದ ಇಂದು ಖಾಸಗಿ ದರ್ಬಾರ್​ನಲ್ಲಿ ಯದು ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದುರ್ಗಾ ಪೂಜೆ ನೆರವೇರಿಸಿದರು‌.

ಖಾಸಗಿ ದರ್ಬಾರ್​ನಲ್ಲಿ ದುರ್ಗಾ ಪೂಜೆ

ಅರಮನೆಯ ಅಂಬಾ ವಿಲಾಸ ಅರಮನೆಯಲ್ಲಿ ಎಂಟನೇ ದಿನವಾದ ಇಂದು ದುರ್ಗಾ ದೇವಿಯನ್ನು ಪೂಜಿಸಲಾಗಿದ್ದು, ಈ ದಿನವನ್ನ ಅಷ್ಟಮಿ ಎಂದು ಪೂಜೆ ಮಾಡಲಾಗುತ್ತದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಒಂಟೆಗಳು ಪೂಜೆಯಲ್ಲಿ ಭಾಗಿಯಾಗಿದ್ದವು.

ಕೇವಲ ಬೆರಳೆಣಿಕೆ ಪುರೋಹಿತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ಎಂಟನೇ ದಿನದ ಖಾಸಗಿ ದರ್ಬಾರ್ ನಡೆಸಲಾಯಿತು. ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಸಹ ವಿವಿಧ ಪೂಜಾ ಕೈಂಕರ್ಯ ನಡೆದವು.

ABOUT THE AUTHOR

...view details