ಕರ್ನಾಟಕ

karnataka

ETV Bharat / state

ಹೆಲಿಟೂರಿಸಂ: 'ಸೇವ್‌ ಮೈಸೂರು' ಅಭಿಯಾನಕ್ಕೆ ದುನಿಯಾ ವಿಜಯ್ ಸಾಥ್ - Save Mysore campaign

ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಹೇಗಿರೋತ್ತೋ ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡೋದಕ್ಕೂ ಅಷ್ಟೇ ವಿರೋಧ ಇರುತ್ತದೆ. ಸೇವ್ ಮೈಸೂರು ಕ್ಯಾಂಪೈನ್‌ಗೆ ನನ್ನ ಬೆಂಬಲ ಇದೆ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.

Duniya Vijay
ನಟ ದುನಿಯಾ ವಿಜಯ್

By

Published : Apr 15, 2021, 2:37 PM IST

ಮೈಸೂರು: ಲಿಲತ ಮಹಲ್ ಪ್ಯಾಲೇಸ್ ಸಮೀಪ ಮರ ಕಡಿದು ಹೆಲಿಟೂರಿಸಂ ವಿಚಾರವಾಗಿ ಆರಂಭಗೊಂಡಿರುವ ಸೇವ್ ಮೈಸೂರು ಅಭಿಯಾನಕ್ಕೆ ನಟ ದುನಿಯಾ ವಿಜಯ್ ಸಾಥ್ ನೀಡಿದ್ದಾರೆ.

'ಸೇವ್‌ ಮೈಸೂರು' ಅಭಿಯಾನಕ್ಕೆ ದುನಿಯಾ ವಿಜಯ್ ಸಾಥ್

ಫೇಸ್‌ಬುಕ್‌ನಲ್ಲಿ ಸೇವ್ ಮೈಸೂರು ಅಭಿಯಾನ ಬೆಂಬಲಿಸಿ ಪೋಸ್ಟ್ ಹಾಕಿದ ದುನಿಯಾ ವಿಜಯ್ ಅವರು, ಮೈಸೂರಿನಲ್ಲಿ ಹೆಲಿಟೂರಿಸಂ ಮಾಡೋ ಸಲುವಾಗಿ ಲಲಿತ್​ ಮಹಲ್ ಹೋಟೆಲ್ ಮುಂಭಾಗದ ಮರಗಳನ್ನ ಕಡಿಯೋ ವಿಚಾರ ಗಮನಕ್ಕೆ ಬಂತು. ನಾವುಗಳು ಮರ ಬೆಳೆಸೋಕೆ ಆಗದಿದ್ದರೂ ಮರ ಕತ್ತರಿಸಲು ಮುಂದಾಗಬಾರದು ಎಂದಿದ್ದಾರೆ.

ಸೇವ್ ಮೈಸೂರ್ ಅಭಿಯಾನಕ್ಕೆ ದುನಿಯಾ ವಿಜಯ್ ಸಾಥ್

ಆ ಜಾಗದಲ್ಲಿ ಮರಗಳು ಇರೋದಕ್ಕೆ ಆ ಜಾಗ ಅಷ್ಟು ಸುಂದರವಾಗಿ ಕಾಣೋದು. ಶೂಟಿಂಗ್ ಟೈಂ ಅಲ್ಲಿ ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದಾಗ ಆ ಜಾಗ‌ ನೋಡಿದ್ರೆ ಖುಷಿ ಆಗುತ್ತೆ. ಈ ಯೋಜನೆಯನ್ನ ಮತ್ತೊಮ್ಮೆ ಪರಾಮರ್ಶೆ ಮಾಡಿ, ಮರ ಕಡಿಯೋದನ್ನ ಬಿಟ್ಟು ಪರ್ಯಾಯವಾಗಿ ಹೆಲಿ ಟೂರಿಸಂ ಮಾಡೋ ಪ್ಲಾನ್ ಮಾಡಿ ಎಂದು ಹೇಳಿದ್ದಾರೆ.

ಸರ್ಕಾರದ ಅಭಿವೃದ್ಧಿ ಯೋಜನೆಗೆ ನಮ್ಮ ಬೆಂಬಲ ಹೇಗಿರೋತ್ತೋ ಮರ ಕಡಿದು ಪರಿಸರ ಹಾಳು ಮಾಡಿ ಹೆಲಿ ಟೂರಿಸಂ ಮಾಡೋದಕ್ಕೂ ಅಷ್ಟೆ ವಿರೋಧ ಇರುತ್ತೆ. ಸೇವ್ ಮೈಸೂರು ಕ್ಯಾಂಪೈನ್‌ಗೆ ನನ್ನ ಬೆಂಬಲ ಇದೆ. ಸರ್ಕಾರ ಮತ್ತೆ ಯೋಚನೆ ಮಾಡಿ ಯೋಜನೆ ಕೈಗೆತ್ತಿಕೊಳ್ಳಲಿ ಎಂದು ದುನಿಯಾ ವಿಜಯ್ ಮನವಿ ಮಾಡಿದರು.

ABOUT THE AUTHOR

...view details