ಮೈಸೂರು: ನಗರದ ಕುಕ್ಕರಹಳ್ಳಿ ಕೆರೆಗೆ ವಿವಿಧ ಕಡೆಯಿಂದ ಚರಂಡಿ ನೀರು ಸೇರ್ಪಡೆಯಾಗಿದ್ದು, ವಾಯುವಿಹಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಕ್ಕರಹಳ್ಳಿ ಕೆರೆಗೆ ಚರಂಡಿ ನೀರು ಸೇರ್ಪಡೆ: ವಾಯುವಿಹಾರಿಗಳ ಅಸಮಾಧಾನ - ಕುಕ್ಕರಹಳ್ಳಿ ಕೆರೆಗೆ ಚರಂಡಿ ನೀರು ಸೇರ್ಪಡೆ
ಕುಕ್ಕರಹಳ್ಳಿ ಕೆರೆಗೆ ವಿವಿಧ ಕಡೆಯಿಂದ ಚರಂಡಿ ನೀರು ಸೇರ್ಪಡೆಯಾಗಿದ್ದು, ವಾಯುವಿಹಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
![ಕುಕ್ಕರಹಳ್ಳಿ ಕೆರೆಗೆ ಚರಂಡಿ ನೀರು ಸೇರ್ಪಡೆ: ವಾಯುವಿಹಾರಿಗಳ ಅಸಮಾಧಾನ Drainage water to Kukkarahalli Lake ಕುಕ್ಕರಹಳ್ಳಿ ಕೆರೆಗೆ ಚರಂಡಿ ನೀರು ಸೇರ್ಪಡೆ](https://etvbharatimages.akamaized.net/etvbharat/prod-images/768-512-6277160-thumbnail-3x2-lake.jpg)
ನಗರದ ಹೃದಯಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಗೆ ವಿವಿಧ ಕಡೆಗಳಿಂದ ಚರಂಡಿ ನೀರು ಬಂದು ಸೇರ್ಪಡೆಯಾಗುತ್ತಿದೆ. ಈ ಕೆರೆ ವಿವಿಧ ಬಗೆಯ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಕೆರೆಗೆ ಚರಂಡಿ ನೀರು ಬಂದು ಸೇರುವುದರಿಂದ ಜಲಚರಗಳಿಗೂ ತೊಂದರೆಯಾಗಿದ್ದು, ಕಲುಷಿತ ನೀರಿನ ಮಿಶ್ರಣದಿಂದ ವನ್ಯ ಜೀವಿಗಳ ಮೇಲೂ ಪರಿಣಾಮ ಬೀರುತ್ತದೆ. ಈ ಕೆರೆಗೆ ಹೆಚ್ಚಾಗಿ ಪಡುವಾರಹಳ್ಳಿ ಭಾಗದಿಂದ ಕಲುಷಿತ ನೀರು ಬರುವುದು ಹಾಗೂ ಇಲ್ಲಿ ವಾಯುವಿಹಾರ ಮಾಡಲು ಸಹ ತೊಂದರೆಯಾಗುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇದರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಕೆರೆಗೆ ಚರಂಡಿ ನೀರು ಸೇರ್ಪಡೆಯಾಗುತ್ತಿದೆ ಎಂದು ವಾಯುವಿಹಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ಕೆರೆ ಉಳಿಸಿಕೊಳ್ಳಲು ಅಭಿವೃದ್ಧಿ ಕಾಮಗಾರಿ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.