ಕರ್ನಾಟಕ

karnataka

ETV Bharat / state

ಜೆಎನ್‌ಯು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಡಾ. ವಿಶ್ವನಾಥ್ ನೇಮಕ

ಭಾರತೀಯ ಭಾಷಾ ಕೇಂದ್ರ, ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರದ (ಎಸ್‌ಎಲ್‌ಎಲ್‌ ಆ್ಯಂಡ್‌ ಸಿಎಸ್‌) ಕನ್ನಡ ಭಾಷಾ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಡಾ. ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.

Vishwanath
Vishwanath

By

Published : Aug 23, 2020, 10:45 AM IST

ಮೈಸೂರು: ನವದೆಹಲಿಯ ಪ್ರತಿಷ್ಠಿತ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಕನ್ನಡ ಭಾಷಾ ವಿಭಾಗಕ್ಕೆ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಡಾ.ವಿಶ್ವನಾಥ್ ಅವರು ನೇಮಕಗೊಂಡಿದ್ದಾರೆ.

ಭಾರತೀಯ ಭಾಷಾ ಕೇಂದ್ರ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರದ (ಎಸ್‌ಎಲ್‌ಎಲ್‌ ಅಂಡ್‌ ಸಿಎಸ್‌) ಕನ್ನಡ ಭಾಷಾ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಡಾ.ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಳಗಳರಹಳ್ಳಿ ಗ್ರಾಮದವರಾದ ವಿಶ್ವನಾಥ್, ಮೈಸೂರಿನ ಮಹಾರಾಜ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 27 ವರ್ಷದ ಬೋಧನಾ ಅನುಭವ ಹೊಂದಿದ್ದು, 14 ಜನರಿಗೆ ಪಿಹೆಚ್‌.ಡಿ ಪ್ರಬಂಧ ಮಂಡಿಸಲು ಮಾರ್ಗದರ್ಶನ ಮಾಡಿದ್ದಾರೆ.

ಈ ಹಿಂದೆ ಜೆಎನ್ ಯು ಮುಖ್ಯಸ್ಥರಾಗಿದ್ದ ಡಾ. ಪುರುಷೋತ್ತಮ ಬಿಳಿಮಲೆ ಅವರ ಅವಧಿ ಆ.20ಕ್ಕೆ ಪೂರ್ಣಗೊಂಡಿದೆ. ಮುಖ್ಯಸ್ಥರ ಹುದ್ದೆಗಾಗಿ 36 ಜನರು ಸಂದರ್ಶನದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

...view details