ಮೈಸೂರು:ವರದಕ್ಷಿಣೆ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ದಟ್ಟಗಳ್ಳಿಯಲ್ಲಿ ನಡೆದಿದೆ.
ವರದಕ್ಷಿಣೆ ಕಿರುಕುಳಕ್ಕೆ ನೊಂದ ಗರ್ಭಿಣಿ ಆತ್ಮಹತ್ಯೆಗೆ ಶರಣು - ಮೈಸೂರು ಅಪರಾಧ ಸುದ್ದಿ 2020
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ದಟ್ಟಗಳ್ಳಿಯಲ್ಲಿ ನಡೆದಿದೆ.
ನಿವೇದಿತಾ (19)ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆ 6 ತಿಂಗಳ ಹಿಂದೆಯಷ್ಟೇ ಧನರಾಜ್ ಎಂಬುವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಜ್ಯೋತಿಷಿ ವೃತ್ತಿ ಮಾಡುತ್ತಿದ್ದ ಧನರಾಜ್ ಅವರಿಗೆ ಮದುವೆ ಸಂದರ್ಭದಲ್ಲಿ ಚಿನ್ನಾಭರಣವನ್ನು ನೀಡಲಾಗಿತ್ತು. ಆದರೆ ಇನ್ನಷ್ಟು ಚಿನ್ನಾಭರಣ ಬೇಕು ಎಂದು ಕಿರುಕುಳ ನೀಡಿದ್ದು, 2 ತಿಂಗಳ ಗರ್ಭಿಣಿಯಾಗಿದ್ದ ನಿವೇದಿತಾ ಕಿರುಕುಳ ತಾಳಲಾರದೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ನಿವೇದಿತಾ ಸೋದರಿ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪತಿ ಧನರಾಜ್ ಹಾಗೂ ಮಾವ ಲಕ್ಕಣ್ಣನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.