ಕರ್ನಾಟಕ

karnataka

ETV Bharat / state

ಮೂರು ಹೊಸ ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವುದು ಡೌಟ್ - mysore dasara

ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಇನ್ನೊಂದು ದಿನವಷ್ಟೇ ಬಾಕಿ ಉಳಿದಿದ್ದು, ಮೆರವಣಿಗೆಯಲ್ಲಿ ಮೂರು ಹೊಸ ಆನೆಗಳು ಹೆಜ್ಜೆ ಹಾಕುವುದು ಸಂದೇಹವಾಗಿದೆ.

ಮೂರು ಹೊಸ ಆನೆಗಳು ಜಂಬೂಸವಾರಿ ಮೆರವಣಿಗೆಗೆ ಭಾಗವಹಿಸುವುದು ಡೌಟ್

By

Published : Oct 6, 2019, 3:40 PM IST

ಮೈಸೂರು:ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಇನ್ನೊಂದು ದಿನವಷ್ಟೇ ಬಾಕಿ ಉಳಿದಿದ್ದು, ಮೆರವಣಿಗೆಯಲ್ಲಿ ಮೂರು ಹೊಸ ಆನೆಗಳು ಹೆಜ್ಜೆ ಹಾಕುವುದು ಡೌಟಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಮೂರು ಹೊಸ ಆನೆಗಳು ಜಂಬೂಸವಾರಿ ಮೆರವಣಿಗೆಗೆ ಭಾಗವಹಿಸುವುದು ಡೌಟ್

ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಜಂಬೂಸವಾರಿ ಮೆರವಣಿಗೆ ನೋಡಲು ಲಕ್ಷಾಂತರ ಮಂದಿ ಸೇರಲಿದ್ದಾರೆ. ಅಲ್ಲದೇ ಸಾಂಸ್ಕೃತಿಕ ಕಲಾತಂಡಗಳ ಅಬ್ಬರ, ಜನಜಂಗುಳಿಯ ಕೂಗಾಟ ಹೆಚ್ಚಾಗುವ ಹಿನ್ನಲೆಯಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿರುವ ಈಶ್ವರ, ಬಂಡೀಪುರ ರಾಷ್ಟ್ರೀಯ ಉದ್ಯಾನವನ ಶ್ರೀರಾಂಪುರ ಆನೆ ಶಿಬಿರದಿಂದ ಆಗಮಿಸಿರುವ ಜಯಪ್ರಕಾಶ, ಲಕ್ಷ್ಮಿ ಈ ಮೂರು ಆನೆಗಳಿಗೆ ಜಂಬೂಸವಾರಿ ಮೆರವಣಿಗೆಯಲ್ಲಿ ಕೊಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

13 ಆನೆಗಳ ಪೈಕಿ ಅರ್ಜುನ, ವಿಜಯ, ಅಭಿಮನ್ಯು, ಧನಂಜಯ, ಗೋಪಿ, ದುರ್ಗಾಪರಮೇಶ್ವರಿ, ಬಲರಾಮ, ಕಾವೇರಿ, ವಿಕ್ರಮ, ಗೋಪಾಲಸ್ವಾಮಿ ಈ ಹತ್ತು ಆನೆಗಳು ಮಾತ್ರ ಹೆಜ್ಜೆ ಹಾಕಲಿವೆ.

ABOUT THE AUTHOR

...view details