ಕರ್ನಾಟಕ

karnataka

ETV Bharat / state

ಮೈಸೂರು: ಹುಣಸೂರಲ್ಲಿ ಮಧ್ಯರಾತ್ರಿ ಜೋಡಿ ಕೊಲೆ..

ಹುಣಸೂರಿನಲ್ಲಿ ಮಧ್ಯರಾತ್ರಿ ಜೋಡಿ ಕೊಲೆ. ಸ್ಥಳಕ್ಕೆ ಹೆಚ್ಚುವರಿ ಎಸ್​ಪಿ ನಂದಿನಿ ಭೇಟಿ ನೀಡಿ ಪರಿಶೀಲನೆ.

ಹುಣಸೂರಲ್ಲಿ ಮಧ್ಯರಾತ್ರಿ ಜೋಡಿ ಕೊಲೆ
ಹುಣಸೂರಲ್ಲಿ ಮಧ್ಯರಾತ್ರಿ ಜೋಡಿ ಕೊಲೆ

By

Published : Jun 22, 2023, 10:59 AM IST

Updated : Jun 22, 2023, 12:09 PM IST

ಮೈಸೂರು: ಹುಣಸೂರಿನ ಶಾಮಿಲ್ ಒಂದರಲ್ಲಿ ಕಳೆದ ಮಧ್ಯ ರಾತ್ರಿ ಇಬ್ಬರು ವ್ಯಕ್ತಿಗಳನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪಟ್ಟಣದಲ್ಲಿ ರಾತ್ರಿ ವೇಳೆ ನಡೆದಿರುವ ಕೊಲೆಯಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ. ಕೊಲೆಯಾದವರನ್ನ ವೆಂಕಟೇಶ್ ಹಾಗೂ ಷಣ್ಮುಖ ಎಂದು ಗುರುತಿಸಲಾಗಿದ್ದು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಪರಸಯ್ಯನ ಛತ್ರದ ಬಳಿ ಇರುವ ಎಸ್​​ ಎನ್ ಶಾಮಿಲ್​​ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ (75) ಹಾಗೂ ಶಾಮಿಲ್​​ನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಅಲ್ಲೇ ವಾಸವಿದ್ದ, ಮಾನಸಿಕ ಅಸ್ವಸ್ಥನಾಗಿದ್ದ ಷಣ್ಮುಖ (65) ಕೊಲೆಯಾದವರು.

ಪ್ರತಿದಿನ ಶಾಮಿಲ್ ಒಳಗೆ ಮಲಗುತ್ತಿದ್ದ ವೆಂಕಟೇಶ್ ಬೆಳಗ್ಗೆ ಬೇಗ ಎದ್ದು ಕೆಲಸದಲ್ಲಿ ನಿರತರಾಗುತ್ತಿದ್ದರು. ಆದ್ರೆ ಇಂದು ಬೆಳಗ್ಗೆ 7 ಗಂಟೆಯಾದರು ಹೊರಗೆ ಬಂದಿರಲಿಲ್ಲ. ಇದರಿಂದಾಗಿ ಅಕ್ಕಪಕ್ಕದ ಮನೆಯವರು ಅನುಮಾಗೊಂಡು ಶಾಮಿಲ್​ನ ಮಾಲೀಕರಿಗೆ ವಿಚಾರ ತಿಳಿಸಿದ್ದರು. ಬಳಿಕ ಮಾಲೀಕರು ಶಾಮಿಲ್​​ಗೆ ಬಂದು ಪರಿಶೀಲನೆ ನಡೆಸಿದಾಗ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಲೀಕರು ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ಪೋಲಿಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆಗೆ ಕಾರಣ ನಿಗೂಢ:ಶಾಮಿಲ್​​ನಲ್ಲಿ ಮಧ್ಯರಾತ್ರಿ ವಾಚ್ ಮ್ಯಾನ್ ವೆಂಕಟೇಶ್ ಹಾಗೂ ಷಣ್ಮುಖ ಕೊಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಅಮಾಯಕರ ಹತ್ಯೆಗೆ ದುಷ್ಕರ್ಮಿಗಳು ಸಂಚು ಏನು ಎಂದು ತಿಳಿದಿಲ್ಲ. ಬಹುಶಃ ಬೆಲೆ ಬಾಳುವ ಮರಗಳನ್ನು ಕದಿಯಲು ಬಂದಿರಬಹುದೇ ಅಥವಾ ಬೇರೆ ಕಾರಣ ಇರಬಹುದೇ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ಪಿ ನಂದಿನಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಅನೈತಿಕ ಸಂಬಂಧ.. ಪ್ರಿಯಕರನಿಂದಲೇ ಕೊಲೆಯಾದ ಮಹಿಳೆ: 4 ತಿಂಗಳ ಬಳಿಕ ಪ್ರಕರಣ ಬಯಲಿಗೆ

ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ತಂದೆಯೇ ಹೆತ್ತಮಕ್ಕಳಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಇಂದು ನಡೆದಿದೆ. ಶ್ರೀಕಾಂತ್ ಎಂಬಾತನೇ ಕೊಲೆ ಮಾಡಿದ ತಂದೆ. ಆದಿತ್ಯ (3) ಹಾಗೂ ಅಮೂಲ್ಯ (4) ಕೊಲೆಯಾದವರು. ಇನ್ನು ಮಕ್ಕಳನ್ನು ಹತ್ಯೆಗೈದ ಬಳಿಕ ಪಾಪಿ, ಪತ್ನಿ ಲಕ್ಷ್ಮೀ ಮೇಲೂ ಹಲ್ಲೆಗೈದ ಎಸ್ಕೇಪ್ ಆಗಿದ್ದಾನೆ. ಹಲ್ಲೆಯಿಂದ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೀಕಾಂತ್ ಕುಟುಂಬ ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದವರಾಗಿದ್ದರು. ಆದರೆ ಕೆಲಸ ನಿಮಿತ್ತವಾಗಿ ಮರಳಗಾಲ ಗ್ರಾಮದಲ್ಲಿ ವಾಸಿಸುತ್ತಿದ್ದರು. ಶ್ರೀಕಾಂತ್ ಕೃತ್ಯ ಎಸಗಿಲು ಏನು ಕಾರಣ ಎಂಬುದು ತಿಳಿದುಬಂದಿಲ್ಲ. ಘಟನೆ ಬಳಿಕ ಪರಾರಿಯಾಗಿರುವ ಶ್ರೀಕಾಂತ್​ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಲಗಿದ್ದ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಮಗ; ಬೆಂಗಳೂರಿನಲ್ಲಿ ಪ್ರಕರಣ

Last Updated : Jun 22, 2023, 12:09 PM IST

ABOUT THE AUTHOR

...view details