ಮೈಸೂರು:ದೇಶದಲ್ಲೇ ಪ್ರವಾಸಿಗರ ನಗರಿ ಎಂದು ಪ್ರಸಿದ್ದಿ ಪಡೆದಿರುವ ಅರಮನೆ ನಗರಿಗೆ ಈಗ ಡಬ್ಬಲ್ ಡೆಕ್ಕರ್ ಅಂಬಾರಿ ಹೆಸರಿನ 6 ಬಸ್ಗಳು ಬಂದಿದ್ದು, ಏಪ್ರಿಲ್ 1 ರಿಂದ ಈ ಅಂಬಾರಿ ಬಸ್ ನಗರದ ಪ್ರವಾಸಿ ಸ್ಥಳಗಳಲ್ಲಿ ಸಂಚರಿಸಲಿದೆ.
ವಿಶೇಷ ಏನು ?
ಮೈಸೂರು:ದೇಶದಲ್ಲೇ ಪ್ರವಾಸಿಗರ ನಗರಿ ಎಂದು ಪ್ರಸಿದ್ದಿ ಪಡೆದಿರುವ ಅರಮನೆ ನಗರಿಗೆ ಈಗ ಡಬ್ಬಲ್ ಡೆಕ್ಕರ್ ಅಂಬಾರಿ ಹೆಸರಿನ 6 ಬಸ್ಗಳು ಬಂದಿದ್ದು, ಏಪ್ರಿಲ್ 1 ರಿಂದ ಈ ಅಂಬಾರಿ ಬಸ್ ನಗರದ ಪ್ರವಾಸಿ ಸ್ಥಳಗಳಲ್ಲಿ ಸಂಚರಿಸಲಿದೆ.
ವಿಶೇಷ ಏನು ?
ಮೈಸೂರಿಗೆ ಬಂದಿರುವ ಅಂಬಾರಿ ಹೆಸರಿನ ಈ 6 ಡಬ್ಬಲ್ ಡೆಕ್ಕರ್ ಬಸ್ ಕರ್ನಾಟಕ ಟೂರಿಸಂ ಡೆವಲಪ್ಮೆಂಟ್ ಕಾರ್ಪೊರೇಷನ್ ಉಸ್ತುವಾರಿಯಲ್ಲಿ ಸಂಚರಿಸಲಿದ್ದು, ಈ ಬಸ್ ಜಿಲ್ಲಾಧಿಕಾರಿ ಕಚೇರಿ, ಮೈಸೂರು ವಿಶ್ವವಿದ್ಯಾನಿಲಯ, ಅರಮನೆ, ಮೃಗಾಲಯ, ಸೆಂಟ್ ಫಿಲೋಮಿನ ಚರ್ಚ್ ಸೇರಿದಂತೆ ಅರಮನೆ ನಗರದಲ್ಲಿ ಸಂಚರಿಸುವ ಈ 6 ಬಸ್ ಗಳು ಒಬ್ಬ ಒಂದು ಬಾರಿ ಟಿಕೆಟ್ ಖರೀದಿಸಿದರೆ 6 ಬಸ್ಗಳಲ್ಲಿ ಸಂಚರಿಸಬಹುದಾಗಿದೆ.
ಸುಮಾರು ಒಂದೂವರೆ ಗಂಟೆ ಕಾಲವಕಾಶದಲ್ಲಿ ಈ 6 ಬಸ್ಗಳು ಒಂದು ರೌಂಡ್ ಪೂರೈಸಲಿದೆ ಎಂದು ಕರ್ನಾಟಕ ಟೂರಿಸಂ ಡೆವಲಪ್ಮೆಂಟ್ ಕಾರ್ಪೊರೇಷನ್ ಅಧಿಕಾರಿ ಉದಯ್ ಶಂಕರ್ ತಿಳಿಸಿದ್ದು, ಪ್ರಾಯೋಗಿಕವಾಗಿ ನಗರದಲ್ಲಿ ಬಸ್ ಸಂಚರಿಸಲಿದ್ದು, ಕೆಲವು ಕಡೆ ಮರಗಳು ಅಡಚಣೆಯಾಗಲಿದೆ, ಇನ್ನು ಕೆಲವು ಕಡೆ ವಿದ್ಯುತ್ ತಂತಿಗಳು ಅಡಚಣೆಯಾಗಲಿದ್ದು, ಅವುಗಳನ್ನು ನೋಡಿಕೊಂಡು ಏಪ್ರಿಲ್ 1 ರಿಂದ ಅಧಿಕೃತವಾಗಿ ಅರಮನೆ ನಗರಿಯಲ್ಲಿ ಅಂಬಾರಿ ಬಸ್ ಸಂಚರಿಸಲಿದೆ,ಆದ್ರೆ ಟಿಕೆಟ್ ದರ ಇನ್ನು ನಿಗದಿಯಾಗಿಲ್ಲ ಎಂದಿದ್ದಾರೆ.