ಮೈಸೂರು: ಉಪ ಚುನಾವಣೆಗೆ 15 ಕೋಟಿ ಹಣ ಕೊಟ್ಟಿದ್ದು ನಿಮಗೆ ಹೇಗೆ ಗೊತ್ತು, ನಿಮ್ಮ ಬಳಿ ಲೆಕ್ಕ ಇದೆಯೇ. ನಿಮ್ಮ ಚುನಾವಣೆಗೆ ಪಾರ್ಟಿ ಹಣ ಕೊಟ್ಟಿಲ್ಲವೇ ನೀವು ಗಲ್ಲಿ ರೌಡಿ ರೀತಿ ಮಾತನಾಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ಗರಂ ಆಗಿಯೇ ಹೇಳಿಕೆ ನೀಡಿದ್ದಾರೆ
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿ ನನ್ನನ್ನು ಬೊಗಳೋ ನಾಯಿ, ಕಚ್ಚೋ ನಾಯಿ ಎಂಬ ಹೇಳಿಕೆಗಳು ನಿಮ್ಮ ಹಿರಿತನಕ್ಕೆ ಸರಿ ಅಲ್ಲ. ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದಾಗ ನೀವೇ ಬೇಡ ಯಡಿಯೂರಪ್ಪ ಅವರನ್ನ ಸಿಎಂ ಮಾಡೋಣ ಬಿಜೆಪಿ ಸೇರು ಎಂದು ಹೇಳಿದ್ದೀರಿ, ಇದನ್ನ ತಾವು ನೆನಪಿಸಿಕೊಳ್ಳಬೇಕು.
ನಾನು ಉಪ ಚುನಾವಣೆಯಲ್ಲಿ 15 ಕೋಟಿ ಹಣ ಪಡೆದಿದ್ದೆ ಎಂಬ ಹೇಳಿಕೆ ಸರಿ ಅಲ್ಲ, ನನಗೆ 15 ಕೋಟಿ ಹಣ ಕೊಟ್ಟಿದ್ದು ನಿಮಗೆ ಹೇಗೆ ಗೊತ್ತು ಹತ್ತಿರ ದಾಖಲೆಗಳು ಇವೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹ ಯಾರು?:ನನ್ನನ್ನು ಪಕ್ಷ ಬಿಡು ಎಂದು ಹೇಳಲು ಪ್ರತಾಪ್ ಸಿಂಹ ಯಾರು ಅವನು ಬಿಜೆಪಿ ರಾಜ್ಯಾಧ್ಯಕ್ಷನೇ, ನನ್ನನ್ನು ಕೇಳಲು ಸಿಂಹ ಯಾರು. ಯಾರೋ ಮಾಡಿದ ಕೆಲಸವನ್ನ ನನ್ನದು ನನ್ನದು ಎಂದು ಹೇಳಿಕೊಂಡು ತಿರುಗಾಡುವವನು ಇವನು, ಇವನೇನು ಮಾಡಿದ್ದಾನೆ ಎಂಬುದನ್ನ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಮಾತನಾಡುತ್ತೇನೆ ಎಂದು ಪ್ರತಾಪ್ ಸಿಂಹನಿಗೆ ತಿರುಗೇಟು ನೀಡಿದರು.