ಮೈಸೂರು:ಕೊರೊನಾದಿಂದ ಜನರು ಪ್ಯಾನಿಕ್ ಆಗುವುದರ ಬದಲು ಮೆಡಿಕೇಷನ್ ತೆಗೆದುಕೊಂಡು ಹೋಂ ಐಸೋಲೇಷನ್ನಲ್ಲಿರುವುದು ಒಳಿತು. ತೀರಾ ಆರೋಗ್ಯದಲ್ಲಿ ಸಮಸ್ಯೆಯಾದರೆ ಮಾತ್ರ ಆಸ್ಪತ್ರೆಗೆ ಹೋಗಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಕೊರೊನದಿಂದ ಪ್ಯಾನಿಕ್ ಆಗಬೇಡಿ, ಕ್ರಿಟಿಕಲ್ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾಗಿ: ಬಿ.ವೈ.ವಿಜಯೇಂದ್ರ - hospital when its Critical
ಮೈಸೂರು ಜಿಲ್ಲೆಗೆ ಚಾಮರಾಜನಗರ, ಮಡಿಕೇರಿ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ರೋಗಿಗಳು ಬರುತ್ತಿರುವುದರಿಂದ ಇಲ್ಲಿ ಒತ್ತಡ ಹೆಚ್ಚಾಗಿದೆ. ಬೆಡ್, ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಹಾಗಾಗಿ ಕೋವಿಡ್ ಪಾಸಿಟಿವ್ ಬಂದ ತಕ್ಷಣ ಪ್ಯಾನಿಕ್ ಆಗದೆ ಹೋಂ ಐಸೋಲೇಷನ್ ಆಗಿ, ಬಹಳ ಕ್ರಿಟಿಕಲ್ ಆದವರು ಆಸ್ಪತ್ರೆಗೆ ದಾಖಲಾಗಿ ಎಂದು ವಿಜಯೇಂದ್ರ ಹೇಳಿದರು.
ಇಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಜೊತೆ ಆಗಮಿಸಿದ ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿದ್ಧತೆ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಎರಡು ವಾರಗಳ ಕರ್ಫ್ಯೂ ಹಾಕಿದ್ದರಿಂದ ದೊಡ್ಡ ಬದಲಾವಣೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬದಲಾಗಿ ಈ ಸಂದರ್ಭದಲ್ಲಿ ನಮಗೆ ಉಂಟಾಗಿರುವ ಬೆಡ್, ಆಕ್ಸಿಜನ್ ಸೇರಿದಂತೆ ಇತರೆ ಕೊರತೆಗಳನ್ನು ಸರಿಪಡಿಸಬಹುದು ಎಂದು ಹೇಳಿದರು.
ಮೈಸೂರು ಜಿಲ್ಲೆಗೆ ಚಾಮರಾಜನಗರ, ಮಡಿಕೇರಿ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ರೋಗಿಗಳು ಬರುತ್ತಿರುವುದರಿಂದ ಇಲ್ಲಿ ಒತ್ತಡ ಹೆಚ್ಚಾಗಿದೆ. ಬೆಡ್, ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಹಾಗಾಗಿ ಕೋವಿಡ್ ಪಾಸಿಟಿವ್ ಬಂದ ತಕ್ಷಣ ಪ್ಯಾನಿಕ್ ಆಗದೆ ಹೋಂ ಐಸೋಲೇಷನ್ ಆಗಿ ಬಹಳ ಕ್ರಿಟಿಕಲ್ ಆದವರು ಆಸ್ಪತ್ರೆಗೆ ದಾಖಲಾಗಿ ಎಂದು ಹೇಳಿದರು.