ಮೈಸೂರು: ಕೋವಿಡ್ ಬಗ್ಗೆ ಸಾರ್ವಜನಿಕರು ಯಾವುದೇ ರೀತಿ ಭಯ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದ ಇದ್ದು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಕೋವಿಡ್ ಪರೀಕ್ಷೆ ವಿಭಾಗದ ಮುಖ್ಯಸ್ಥ ಡಾ. ಚಿದಂಬರಂ ಹೇಳಿದ್ದಾರೆ.
ಕೋವಿಡ್ ಭಯ ಬೇಡ, ಎಚ್ಚರ ವಹಿಸಿ, ಲಸಿಕೆ ಹಾಕಿಸಿಕೊಳ್ಳಿ: ಮೈಸೂರು ಕೋವಿಡ್ ಪರೀಕ್ಷೆ ವಿಭಾಗದ ಮುಖ್ಯಸ್ಥ - Dont fear for corona
ಮಾಧ್ಯಮಗಳ ವರದಿ ನೋಡಿ ಭಯ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಮರಣ ಪ್ರಮಾಣ ಕಡಿಮೆಯಿದೆ. ವಯಸ್ಸಾದವರು ಮತ್ತು ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಕೋವಿಡ್ ಸೋಂಕು ಬೇಗ ಹರಡುತ್ತಿದೆ. ಕೋವಿಡ್ ಬಗ್ಗೆ ಸಾರ್ವಜನಿಕರು ಯಾವುದೇ ರೀತಿ ಭಯ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದ ಇದ್ದು, ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಕೋವಿಡ್ ಪರೀಕ್ಷೆ ವಿಭಾಗದ ಮುಖ್ಯಸ್ಥ ಡಾ. ಚಿದಂಬರಂ ಹೇಳಿದ್ದಾರೆ.
ಇಂದು ಈಟಿವಿ ಭಾರತ್ ಜತೆ ಮಾತನಾಡಿದ ಮೈಸೂರು ಜಿಲ್ಲೆಯ ಕೋವಿಡ್ ಪರೀಕ್ಷೆ ವಿಭಾಗದ ಮುಖ್ಯಸ್ಥ ಡಾ. ಚಿದಂಬರಂ, ಕಳೆದ ವರ್ಷ ಕೊರೊನಾ ಬಂದವರನ್ನು ಬಿಟ್ಟು ಈಗ ಬೇರೆಯವರಲ್ಲಿ ಕೋವಿಡ್ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಒಂದು ದಿನಕ್ಕೆ 1 ಕಾಲು ಲಕ್ಷ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ 6ರಿಂದ 7 ಸಾವಿರ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದರು.
ಮಾಧ್ಯಮಗಳ ವರದಿ ನೋಡಿ ಭಯ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಮರಣ ಪ್ರಮಾಣ ಕಡಿಮೆಯಿದೆ. ವಯಸ್ಸಾದವರು ಮತ್ತು ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಕೋವಿಡ್ ಸೋಂಕು ಬೇಗ ಹರಡುತ್ತಿದೆ. ಕೋವಿಡ್ ನಿಯಮವನ್ನು ಪಾಲಿಸಿ 46 ವರ್ಷ ಮೇಲ್ಪಟ್ಟ ಎಲ್ಲರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ. ಇದರಿಂದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಡಾ. ಚಿದಂಬರಂ ವಿವರಿಸಿದರು.