ಮೈಸೂರು: ಕರ್ನಾಟಕದಿಂದ ಬಿಜೆಪಿಯನ್ನು ಈ ಲೋಕಸಭಾ ಚುನಾವಣೆಯಲ್ಲಿ ತೊಲಗಿಸಿ ಎಂದು ಎಐಸಿಸಿ ರಾಹುಲ್ ಗಾಂಧಿ ಕರೆ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ: ರಾಹುಲ್ ಗಾಂಧಿ - ಮೈಸೂರು
ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಜಾರಿಗೆ ಬಂದ ನಂತರ ದೇಶದ ಚುನಾವಣಾ ವ್ಯವಸ್ಥೆಯೇ ಬುಡಮೇಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಇಂದು ಕೆ.ಆರ್. ನಗರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ಚುನಾವಣೆ ನ್ಯಾಯ-ಅನ್ಯಾಯ, ಸತ್ಯ-ಅಗತ್ಯತೆಗಳ ನಡುವೆ ನಡೆಯುತ್ತಿದೆ. ಹಾಗಾಗಿ ಕರ್ನಾಟಕದಿಂದ ಬಿಜೆಪಿ ತೊಲಗಿಸಬೇಕೆಂದು ಕರೆ ನೀಡಿದ ರಾಹುಲ್, ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಜಾರಿಗೆ ಬಂದ ನಂತರ ದೇಶದ ಚುನಾವಣಾ ವ್ಯವಸ್ಥೆಯೇ ಬುಡಮೇಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್ಟಿಯನ್ನು ತೆಗೆದು ಹಾಕುತ್ತೇವೆ. ನರೇಂದ್ರ ಮೋದಿ ಈ ದೇಶದ ಜನರ ಚೌಕಿದಾರ ಅಲ್ಲ. ಬದಲಾಗಿ ಅನಿಲ್ ಅಂಬಾನಿ ಅಂತಹ ಶ್ರೀಮಂತರ ಚೌಕಿದಾರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ರೈತರ ಬಜೆಟ್ ಮಂಡಿಸುತ್ತೇವೆ ಎಂದರು.