ಮೈಸೂರು: ಕಾಡಿನಿಂದ ಆಕಸ್ಮಿಕವಾಗಿ ಗ್ರಾಮದತ್ತ ಹೆಜ್ಜೆ ಹಾಕಿದ ಜಿಂಕೆಯೊಂದು ನಾಯಿಗಳ ದಾಳಿಗೆ ಬಲಿಯಾಗಿದೆ. ನಂಜನಗೂಡು ತಾಲೂಕಿನ ಚಿನ್ನಂಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀರು ಅರಸಿ ಬಂದ ಜಿಂಕೆಯನ್ನು ಅಟ್ಟಿಸಿಕೊಂಡು ಬಂದ ನಾಯಿಗಳು ಕಚ್ಚಿ ಸಾಯಿಸಿವೆ
ನೀರು ಅರಸಿ ನಾಡಿಗೆ ಬಂದ ಜಿಂಕೆಯನ್ನೇ ಕಚ್ಚಿ ಕೊಂದ ಶ್ವಾನಗಳು! - ನಾಯಿ ದಾಳಿ
ನೀರು ಅರಸಿ ನಾಡಿಗೆ ಬಂದ ಜಿಂಕೆಯೊಂದು ನಾಯಿಗಳ ಬಾಯಿಗೆ ತುತ್ತಾಗಿದೆ. ದಾಳಿಯಿಂದ ಜಿಂಕೆ ಒದ್ದಾಡಿ ಒದ್ದಾಡಿ ಮೃತಪಟ್ಟಿದೆ.
ನಾಯಿಗಳ ದಾಳಿಗೆ ಬಲಿಯಾದ ಜಿಂಕೆ
ದೃಶ್ಯ ನೋಡುತ್ತಿದ್ದ ಗ್ರಾಮಸ್ಥರು ನಾಯಿಗಳನ್ನು ದೊಣ್ಣೆಗಳಿಂದ ಹೊಡೆದು ಓಡಿಸಿದ್ದಾರೆ. ಅದರೆ, ಕತ್ತನ್ನು ಗಂಭೀರವಾಗಿ ಕಚ್ಚಿ ಹಿಡಿದಿದ್ದರಿಂದ ಜಿಂಕೆ ಅಲ್ಲಿಯೇ ಒದ್ದಾಡಿ ಮೃತಪಟ್ಟಿದೆ. ಸ್ಥಳಕ್ಕೆ ನಂಜನಗೂಡು ಉಪವಲಯ ಅರಣ್ಯಾಧಿಕಾರಿ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.