ಮೈಸೂರು/ನಂಜನಗೂಡು: ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿಯಲ್ಲಿಬೀದಿ ನಾಯಿಗಳು ಅಟ್ಟಹಾಸ ಮೆರೆದಿವೆ. ಶ್ವಾನಗಳ ದಾಳಿಯಿಂದ ಐವರು ಮಕ್ಕಳು ಗಾಯಗೊಂಡಿದ್ದಾರೆ.
ಬೀದಿ ನಾಯಿಗಳ ಅಟ್ಟಹಾಸ: ಶ್ವಾನ ದಾಳಿಯಿಂದ ಐವರು ಮಕ್ಕಳಿಗೆ ಗಾಯ - dogs problem in mysore
ಬೀದಿ ನಾಯಿಗಳ ಹಾವಳಿಗೆ ಹೆಚ್ಚಾಗಿದೆ. ನಾಯಿ ದಾಳಿಯಿಂದ ಐವರು ಮಕ್ಕಳು ಗಾಯಗೊಂಡಿದ್ದು, ಓರ್ವ ಬಾಲಕಿಗೆ ಗಂಭೀರ ಗಾಯಗಳಾಗಿವೆ. ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
![ಬೀದಿ ನಾಯಿಗಳ ಅಟ್ಟಹಾಸ: ಶ್ವಾನ ದಾಳಿಯಿಂದ ಐವರು ಮಕ್ಕಳಿಗೆ ಗಾಯ dog attacked on childrens: seriously injured](https://etvbharatimages.akamaized.net/etvbharat/prod-images/768-512-6032725-thumbnail-3x2-surya.jpg)
ಆಟವಾಡುತ್ತಿದ್ದ ಐವರ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಐವರಲ್ಲಿ ಓರ್ವ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ. ಈಕೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ನಾಲ್ವರು ಮಕ್ಕಳನ್ನು ನಂಜನಗೂಡು ತಾಲೂಕಾಸ್ಪತ್ರೆಗೆ ಸೇರಿಸಲಾಗಿದೆ.
ನಾಯಿಗಳ ಹಾವಳಿಯನ್ನು ತಡೆಯುವಂತೆ ದೂರು ನೀಡಿದ್ರೂ ಯಾವ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿರುವ ಮಕ್ಕಳ ಆಸ್ಪತ್ರೆಯ ಖರ್ಚನ್ನು ಗ್ರಾಮ ಪಂಚಾಯ್ತಿಯೇ ಭರಿಸಬೇಕೆಂದು ಬಡಾವಣೆಯ ಜನರು ಆಗ್ರಹಿಸಿದ್ದಾರೆ.