ಮೈಸೂರು: ಗೆದ್ದ ಮೇಲೆ ನಮ್ಮೂರಿಗೆ ಕಾಲಿಡಲಿಲ್ಲ. ಈಗ ಉಪ ಚುನಾವಣೆ ಬಂದಿದೆ ಅಂತಾ ವೋಟ್ ಕೇಳುವುದಕ್ಕೆ ಬಂದಿದ್ದೀರಾ?, ನಮ್ಮೂರಿಗೆ ಕಾಲಿಡಬೇಡಿ ಎಂದು ಬಿಜೆಪಿ ಅಭ್ಯರ್ಥಿಹೆಚ್. ವಿಶ್ವನಾಥ್ ಗೆ ಯುವಕರು ಘೇರಾವ್ ಹಾಕಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಮ್ಮೂರಿಗೆ ಕಾಲಿಡಬೇಡಿ... ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆ ಯುವಕರಿಂದ ಘೇರಾವ್ - ದೊಡ್ಡಹೆಜ್ಜೂರು ಗ್ರಾಮದ ಯುವಕರಿಂದ ಎಚ್ ವಿಶ್ವನಾಥ್ಗೆ ಕ್ಲಾಸ್
ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ದೊಡ್ಡಹೆಜ್ಜೂರು ಗ್ರಾಮಕ್ಕೆ ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್ ಮತ ಕೇಳಲು ಬಂದಾಗ ಗ್ರಾಮದ ಯುವಕರು ವಿಶ್ವನಾಥ್ ಅವರನ್ನು ದಾರಿ ಮಧ್ಯ ತಡೆದರು. ಇಷ್ಟು ದಿನ ಬರವರು ಈಗ ಉಪ ಚುನಾವಣೆ ಬಂದಿತೆಂದು ಇತ್ತ ಸುಳಿದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸರಿ ಎಂದು ಹೇಳಿ ಮರು ಮಾತನಾಡದೆ ವಿಶ್ವನಾಥ್ ಅಲ್ಲಿಂದ ತೆರಳಿದ್ದಾರೆ.
ಹೆಚ್.ವಿಶ್ವನಾಥ್ ಗೆ ಯುವಕರ ಕ್ಲಾಸ್
ದಿನದಿಂದ ದಿನಕ್ಕೆ ಹುಣಸೂರು ಉಪ ಚುನಾವಣೆ ರಂಗು ಪಡೆಯುತ್ತಿದ್ದು ಅಭ್ಯರ್ಥಿಗಳು ಗ್ರಾಮ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ನಿನ್ನೆ ಸಂಜೆ ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ದೊಡ್ಡಹೆಜ್ಜೂರು ಗ್ರಾಮಕ್ಕೆ ಬಿಜೆಪಿ ಅಭ್ಯರ್ಥಿಹೆಚ್. ವಿಶ್ವನಾಥ್ ಮತಯಾಚನೆಗೆ ತೆರಳಿದ್ದರು.
ಗ್ರಾಮದ ಹೊರಗೆ ನಿಂತಿದ್ದ ಯುವಕರು, ಕಳೆದ ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದೀರಿ. ಅನಂತರ ಈ ಕಡೆ ಸುಳಿಯಲೇ ಇಲ್ಲ. ಹುಣಸೂರು ತಾಲೂಕನ್ನೇ ಬಿಟ್ಟು ಹೋಗಿಬಿಟ್ರಿ ಎಂದ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಮರು ಮಾತನಾಡದೇ ಹೆಚ್ ವಿಶ್ವನಾಥ್ ಸರಿ ಸರಿ ಎನ್ನುತ್ತ ಅಲ್ಲಿಂದ ಕಾಲ್ಕಿತ್ತರು.