ಕರ್ನಾಟಕ

karnataka

ETV Bharat / state

ಸಂಬಳ ಬೇಡ: ಉಚಿತ ಸೇವೆ ನೀಡಲು ಮುಂದೆ ಬಂದ ವೈದ್ಯರು, ಸ್ವಯಂ ಸೇವಕರು! - ಸಂಬಳವಿಲ್ಲದೇ ವೈದ್ಯರ ಸೇವೆ

ಮೈಸೂರಿನಲ್ಲಿ ಲಕ್ಷ ಸಂಬಳ ಕೊಡುತ್ತೇವೆಂದರೂ ಯಾವುದೇ ವೈದ್ಯರು ಬರುತ್ತಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇದೀಗ ವೈದ್ಯರು ಸೇರಿದಂತೆ ಪ್ಯಾರಾಮೆಡಿಕಲ್, ನರ್ಸಿಂಗ್ ಮುಂತಾದವರು ಸಂಬಳ ಬೇಡ ಎಂದು ಸ್ವಯಂ ಸೇವಕರಾಗಿ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ.

mysore
mysore

By

Published : May 15, 2021, 9:33 PM IST

Updated : May 15, 2021, 10:35 PM IST

ಮೈಸೂರು:ಒಂದೆಡೆ ಲಕ್ಷ ರೂ. ಸಂಬಳ ಕೊಟ್ಟರೂ ಕೆಲಸಕ್ಕೆ ಬಾರದ ವೈದ್ಯರು ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನೆಲ್ಲೇ ನಯಾಪೈಸೆ ಹಣ ಕೇಳದೇ ಉಚಿತ ಸೇವೆ ಸಲ್ಲಿಸುತ್ತಿರುವ ವೈದ್ಯರು ದೇವರಂತೆ ಬಂದಿದ್ದಾರೆ‌.

ವೈದ್ಯರು, ಪ್ಯಾರಾಮೆಡಿಕಲ್, ನರ್ಸಿಂಗ್, ನಾನ್‌ ಮೆಡಿಕಲ್ ಹೀಗೆ ಉಚಿತ ಸೇವೆಗೆ ಗಟ್ಟಿಗರು ನಿಂತಿದ್ದಾರೆ. ಮೈಸೂರು ಜಿಲ್ಲಾಡಳಿತಕ್ಕೆ 'ಕೋವಿಡ್ ಮಿತ್ರ' ನೆರವಿಗೆ ಆರು ಮಂದಿ ವೈದ್ಯರು ಹಾಗೂ ಸ್ವಯಂ ಸೇವಕರು ಧಾವಿಸಿದ್ದಾರೆ. ತುಳಸಿದಾಸಪ್ಪ, ಬೀಡಿ ಕಾರ್ಮಿಕರ ಆಸ್ಪತ್ರೆ, ಟೆಲಿ ಮೆಡಿಕಲ್ ಸೆಂಟರ್‌ನಲ್ಲಿ ಸೋಂಕಿತರಿಗೆ ಉಚಿತ ಸೇವೆ ನೀಡಲು 30ಕ್ಕೂ ಹೆಚ್ಚು ಸ್ವಯಂಸೇವಕರು ಹಾಗೂ 6 ಮಂದಿ ವೈದ್ಯರು ಹಗಲಿರುಳು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.

ಉಚಿತ ಸೇವೆ ನೀಡಲು ಮುಂದೆ ಬಂದ ವೈದ್ಯರು, ಸ್ವಯಂ ಸೇವಕರು

ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತುಕೊಳ್ಳುವ ಬದಲು ಆಸ್ಪತ್ರೆಗೆ ಬಂದು ಕೆಲಸ ಮಾಡುತ್ತಿದ್ದೇವೆ. ಯಾವುದೇ ಹಣ ಅಪೇಕ್ಷೆ ಇಲ್ಲದೇ ಕೆಲಸ ಮಾಡುತ್ತಿದ್ದೇವೆ ಎಂದು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ನಾನ್‌ ಮೆಡಿಕಲ್ ಸ್ವಯಂಸೇವಕರು ಹೇಳಿದ್ದಾರೆ.

ವೈದ್ಯರಿಗೆ 64 ಸಾವಿರ ರೂ. ಸಂಬಳ ನಿಗದಿ ಮಾಡಿರುವ ಸರ್ಕಾರ, ಜಿಲ್ಲಾಡಳಿತ, ಮುಡಾ ಅನುದಾನ ಸೇರಿ 1 ಲಕ್ಷ ರೂ. ಸಂಬಳ ಆಫರ್ ಕೊಟ್ಟರೂ ವೈದ್ಯರು ಸಿಗುತ್ತಿಲ್ಲ ಅಂತ ಶಾಸಕರಾದ ಡಾ.ಯತೀಂದ್ರ, ಸಾ.ರಾ.ಮಹೇಶ್, ತನ್ವೀರ್ ಸೇಠ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಉಚಿತ ಸೇವೆಗೆ ಸ್ವಯಂಸೇವಕರು ಹಾಗೂ ವೈದ್ಯರು ಮುಂದೆ ಬಂದಿರುವುದು ಜಿಲ್ಲಾಡಳಿತಕ್ಕೆ ಕೊಂಚ ಧೈರ್ಯ ಬಂದಂತಾಗಿದೆ.

Last Updated : May 15, 2021, 10:35 PM IST

ABOUT THE AUTHOR

...view details