ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ. ದಿನೇಶ್ ಕುಮಾರ್ ಮೈಸೂರು : ಲೇಸರ್ ಸಿಸ್ಟೊಲಿಥೊಟ್ರಿಪ್ಸಿ - ಸಾಂಪ್ರದಾಯಿಕವಾದ ತೆರೆದ ಶಸ್ತ್ರಚಿಕಿತ್ಸೆ ಮಾಡದೇ ಕನಿಷ್ಠ ಅಪಾಯಕಾರಿ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ 5x5.5x6 ಸೆಂ.ಮೀ ಅಳತೆಯ ದೊಡ್ಡ ಗಾತ್ರದ ಮೂತ್ರಕೋಶದ ಕಲ್ಲನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಲೇಸರ್ ಸಿಸ್ಟೋಲಿಥೊಟ್ರಿಪ್ಸಿ ಬಗ್ಗೆ ವೈದ್ಯರು ಹೇಳಿದ್ದೇನು? : ಮೈಸೂರಿನ ನಿವಾಸಿಯಾದ ಶ್ರೀ ಕಮಲ್ (40) (ಹೆಸರು ಬದಲಾಯಿಸಲಾಗಿದೆ), ಮೂತ್ರ ವಿಸರ್ಜಿಸುವಾಗ ನೋವು ಮತ್ತು ಸುಡುವ ಬೇನೆ, ಮೂತ್ರದಲ್ಲಿ ರಕ್ತ (ಹೆಮಟುರಿಯಾ) ಮತ್ತು ಮೂತ್ರದ ಹರಿವಿನ ಅಡಚಣೆಯ ಸ್ಥಿತಿಯೊಂದಿಗೆ ಮಣಿಪಾಲ್ ಆಸ್ಪತ್ರೆಯ ಡಾ. ದಿನೇಶ್ ಕುಮಾರ್ ಟಿ. ಪಿ, ಕನ್ಸಲ್ಟೆಂಟ್ - ಊರೊಲೊಜಿ, ಆಂಡ್ರಾಲಜಿ, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಇವರನ್ನು ಸಂಪರ್ಕಿಸಿದರು. ಜಾಗರೂಕತೆಯಿಂದ ಪರಿಶೀಲನೆ ಮತ್ತು ರೋಗನಿರ್ಣಯದ ಪರೀಕ್ಷೆಗಳ ನಂತರ, ಡಾ. ದಿನೇಶ್ ಕುಮಾರ್ ಟಿ ಪಿ ಅವರು ಕಮಲ್ ಅವರ ರೋಗಲಕ್ಷಣಗಳಿಗೆ ಮೂತ್ರಕೋಶದಲ್ಲಿರುವ ಒಂದು ದೊಡ್ಡ ಕಲ್ಲು ಕಾರಣ ಎಂದು ಗುರುತಿಸಿದರು.
ಶಸ್ತ್ರಚಿಕಿತ್ಸೆಯ ಮೂಲಕ ಕಲ್ಲು ತೆಗೆಯುವುದಾಗಿ ವೈದ್ಯರು ಶ್ರೀ ಕಮಲ್ ಅವರಿಗೆ ಸಲಹೆ ನೀಡಿದರು. ಶ್ರೀ ಕಮಲ್ ನಂತರ ಅವರ ಈ ಸ್ಥಿತಿಯ ಬಗ್ಗೆ ಅವರಿಗೆ ಮೊದಲೇ ತಿಳಿದಿತ್ತು ಎಂದು ಹೇಳಿದರು. ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡುವ ಮುನ್ನ ಅವರು ಹಲವು ಇತರ ಆಸ್ಪತ್ರೆಗಳಲ್ಲಿ ಸಮಾಲೋಚನೆ ನಡೆಸಿದ್ದರು. ಮೂತ್ರಕೋಶವನ್ನು ತೆಗೆಯಲು ತೆರೆದ ಶಸ್ತ್ರಚಿಕಿತ್ಸೆಗೆ ಒಳಪಡುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ, ದೀರ್ಘವಾದ ಚೇತರಿಕೆಯ ಸಮಯ ಮತ್ತು ಶಸ್ತ್ರಚಿಕಿತ್ಸೆಯ ನಂತರ ಉಂಟಾಗುವ ಅಸ್ವಸ್ಥತೆಯ ಕಾರಣದಿಂದಾಗಿ ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಗ್ಗೆ ಶ್ರೀ ಕಮಲ್ ಅವರು ಚಿಂತಿತರಾಗಿದ್ದರು. ಮೈಸೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಯ ಡಾ. ದಿನೇಶ್ ಕುಮಾರ್ ಟಿ ಪಿ ಅವರು ಶ್ರೀ ಕಮಲ್ ಅವರ ಪ್ರಕರಣವನ್ನು ಎಚ್ಚರಿಕೆಯಿಂದ ಪರಿಶೀಲನೆ ಮಾಡಿದರು ಮತ್ತು ಲೇಸರ್ ಸಿಸ್ಟೊಲಿಥೊಟ್ರಿಪ್ಸಿ ಮೂಲಕ ಕಲ್ಲನ್ನು ತೆಗೆದುಹಾಕುವುದಾಗಿ ಅವರಿಗೆ ಮನವರಿಕೆ ಮಾಡಿದರು.
ಪ್ರೊಸಿಜರ್ ಬಗ್ಗೆ ವಿವರ : ಈ ಹೊಸ ರೀತಿಯ ಕನಿಷ್ಠ ಅಪಾಯಕಾರಿ ವಿಧಾನದ ಕುರಿತು ಮಾತನಾಡಿದ ಡಾ. ದಿನೇಶ್ ಕುಮಾರ್ ಟಿ. ಪಿ, "ಲೇಸರ್ ಸಿಸ್ಟೊಲಿಥೊಟ್ರಿಪ್ಸಿ ಒಂದು ಸುಧಾರಿತ ಕನಿಷ್ಠ ಅಪಾಯಕಾರಿ ತಂತ್ರವಾಗಿದೆ. ಈ ಕಾರ್ಯವಿಧಾನವು ನಿಖರವಾದ ಕಲ್ಲಿನ ತುಂಡುಗಳನ್ನು ತೆಗೆಯಲು ಲೇಸರ್ ಶಕ್ತಿಯನ್ನು ಬಳಸುತ್ತದೆ. ಈ ವಿಧಾನದಿಂದ, ಮೂತ್ರಕೋಶದ ಕಲ್ಲನ್ನು ಸಣ್ಣ ಮಣ್ಣಿನಂತಹ ಕಣಗಳಾಗಿ ಪುಡಿಮಾಡಿ, ಮೂತ್ರನಾಳದ ಮೂಲಕ ಅದನ್ನು ತೆಗೆದುಹಾಕಿ, ಸಾಮಾನ್ಯ ಮೂತ್ರ ಹೋಗುವ ಜಾಗದ ಮೂಲಕ ಹೊರಹಾಕಬಹುದು ಮತ್ತು ಇದರಲ್ಲಿ ಮೂತ್ರ ಕೋಶ ತೆರೆಯುವ ಅಗತ್ಯವಿಲ್ಲ. ಈ ಉದ್ದೇಶಿತ ಲೇಸರ್ ಶಕ್ತಿಯೊಂದಿಗೆ, ಸುತ್ತಮುತ್ತಲಿನ ಅಂಗಾಂಶಗಳಿಗೆ ಕನಿಷ್ಠ ಹಾನಿ ಆಗುತ್ತದೆ. ಚೇತರಿಕೆ ವೇಗವಾಗಿರುತ್ತದೆ ಮತ್ತು ಇದು ಶ್ರೀ ಕಮಲ್ ಅವರಂತಹ ಪ್ರಕರಣಗಳಿಗೆ ಸೂಕ್ತವಾದ ಆಯ್ಕೆಯಾಗಿದೆ'' ಎಂದಿದ್ದಾರೆ.
ಇದನ್ನೂ ಓದಿ :ಕಿಡ್ನಿ ವೈಪಲ್ಯಕ್ಕೊಳಗಾದ ಪತಿಗೆ ತನ್ನ ಕಿಡ್ನಿ ನೀಡಲು ಮುಂದಾದ ಪತ್ನಿ.. ಚಿಕಿತ್ಸೆಗೆ ಬೇಕಿದೆ ಸಹೃದಯಿಗಳ ನೆರವು