ಮೈಸೂರು: ನೂತನ ಪಠ್ಯ ಪರಿಷ್ಕರಣೆ ಸಂಬಂಧ ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಅದಕ್ಕೆ ಮತ್ತೊಂದು ಘಟನೆ ಸೇರಿಕೊಂಡಿದೆ. ನೂತನ ಪಠ್ಯದಲ್ಲಿ ತಮ್ಮ ಕಥನನ ಭಾಗವನ್ನು ಸೇರಿಸಬೇಡಿ. ಇದಕ್ಕೆ ಈ ಹಿಂದೆ ನೀಡಿದ್ದ ಅನುಮತಿಯನ್ನ ನಾನು ವಾಪಸ್ ಪಡೆದಿದ್ದೇನೆ ಎಂದು ಸರ್ಕಾರಕ್ಕೆ ಹಿರಿಯ ಸಾಹಿತಿ ದೇವನೂರು ಮಹಾದೇವ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಪಠ್ಯ ಪರಿಷ್ಕರಣೆಯ ಕುರಿತಾದ ವಾದ-ವಿವಾದಗಳು ನಡೆಯುತ್ತಿದ್ದು, 10ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ನನ್ನದು ಒಂದು ಕಥನದ ಭಾಗ ಸೇರಿದೆ ಎನ್ನಲಾಗುತ್ತಿದೆ. ಈ ಹಿಂದೆ ಹಳೆ ಪಠ್ಯಕ್ಕೆ ನೀಡಿದ ಅನುಮತಿಯನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.