ತುಮಕೂರು:ಶಿರಾ ವಿಧಾನಸಭೆ ಉಪಚುನಾವಣೆ ಪ್ರಚಾರದ ವೇಳೆ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ವಿಷವನ್ನು ಕೊಡಬೇಡಿ, ಹಾಲನ್ನೂ ಕೊಡಬೇಡಿ, ಬದಲಾಗಿ ಕಷಾಯವನ್ನು ಕೊಟ್ಟು ಕಳುಹಿಸಿ ಎಂದು ಹೇಳುವ ಮೂಲಕ ಮೈಸೂರು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ಹೆಚ್ಡಿಕೆಗೆ ವಿಷ, ಹಾಲು ಕೊಡಬೇಡಿ - ಬದಲಿಗೆ ಕಷಾಯ ಕೊಡಿ: ಸಂಸದ ಪ್ರತಾಪ್ ಸಿಂಹ ಟಾಂಗ್ - Shira constituency election news
ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಲೆನಹಳ್ಳಿ ಗೇಟ್ ಬಳಿಯ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ವಿಷ ಕೊಡಬೇಡಿ, ಹಾಲನ್ನು ಕೊಡಬೇಡಿ, ಬದಲಾಗಿ ಕಷಾಯ ಕೊಟ್ಟು ಕಳುಹಿಸಿ ಎಂದು ಟಾಂಗ್ ಕೊಟ್ಟಿದ್ದಾರೆ.
![ಹೆಚ್ಡಿಕೆಗೆ ವಿಷ, ಹಾಲು ಕೊಡಬೇಡಿ - ಬದಲಿಗೆ ಕಷಾಯ ಕೊಡಿ: ಸಂಸದ ಪ್ರತಾಪ್ ಸಿಂಹ ಟಾಂಗ್ ಸಂಸದ ಪ್ರತಾಪ್ ಸಿಂಹ](https://etvbharatimages.akamaized.net/etvbharat/prod-images/768-512-9023831-979-9023831-1601638613293.jpg)
ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಲೆನಹಳ್ಳಿ ಗೇಟ್ ಬಳಿ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಂದು ಕೂಡ ಕಣ್ಣೀರಿಡುವುದಿಲ್ಲ. ಬದಲಾಗಿ ಅವರ ಮುಖದಲ್ಲಿ ಸಾತ್ವಿಕ ಸಿಟ್ಟು ಕಾಣುತ್ತದೆ. ಆದರೆ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಪತ್ನಿ ಸಹೋದರರು ಭಾಗವಹಿಸಿರುತ್ತಾರೆ. ಅಲ್ಲಿ ಅವರು ಕಣ್ಣೀರಿಡುವುದನ್ನು ಮುಖ್ಯವಾಗಿಸಿಕೊಳ್ಳುತ್ತಾರೆ ಎಂದರು.
ಇನ್ನು ಸಿದ್ದರಾಮಯ್ಯ ಅವರು ಕನ್ನಂಬಾಡಿ ಕಟ್ಟೆ ಕಟ್ಟಿದಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸದೇ, ಮೈಸೂರು ವಂಶವನ್ನು ನಿರ್ವಂಶ ಮಾಡಿದಂತಹ ಟಿಪ್ಪು ಸುಲ್ತಾನ್ ನಂತಹ ವ್ಯಕ್ತಿಯನ್ನು ನೆನಪಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.