ಮೈಸೂರು :ಕೋವಿಡ್ ಸೆಂಟರ್ನಲ್ಲಿ ದೀಪಾವಳಿ ಆಚರಿಸುವ ಮೂಲಕ ಕೊರೊನಾ ಸೋಂಕಿತರ ಮುಖದಲ್ಲಿ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿತು.
ಕೊರೊನಾ ಸೆಂಟರ್ನಲ್ಲಿ ದೀಪಾವಳಿ ಆಚರಣೆ - ಕೊರೊನಾ ಸೆಂಟರ್ನಲ್ಲಿ ದೀಪಾವಳಿ ಆಚರಣೆ
ಕೋವಿಡ್ ಸೆಂಟರ್ನಲ್ಲಿ ನಿವೃತ್ತ ಕರ್ನಲ್ ಅಶೋಕ್ ನೇತೃತ್ವದಲ್ಲಿ ದೀಪಾವಳಿ ಆಚರಣೆ ಮಾಡಲಾಯಿತು.

ಮೈಸೂರು: ಕೊರೊನಾ ಸೆಂಟರ್ನಲ್ಲಿ ದೀಪಾವಳಿ ಆಚರಣೆ
ಕೊರೊನಾ ಸೆಂಟರ್ನಲ್ಲಿ ದೀಪಾವಳಿ ಆಚರಣೆ
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪ ಇರುವ ಕೆಎಸ್ಒಯು ಕಟ್ಟಡದ ಕೋವಿಡ್ ಸೆಂಟರ್ನಲ್ಲಿ ನಿವೃತ್ತ ಕರ್ನಲ್ ಅಶೋಕ್ ನೇತೃತ್ವದಲ್ಲಿ ದೀಪಾವಳಿ ಆಚರಣೆ ಮಾಡಲಾಯಿತು. ದೀಪ ಬೆಳಗಿಸಿ, ಪರಸ್ಪರ ಶುಭ ಹಾರೈಸಿದ ಕೊರೊನಾ ಸೋಂಕಿತರಿಗೆ, ಕೋವಿಡ್ ಸೆಂಟರ್ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಸಾಥ್ ನೀಡಿದರು. ಕೊರೊನಾ ಸೋಂಕಿತರು, ಮನೆಯ ಸದಸ್ಯರಂತೆ ಎಲ್ಲರು ಬೆರೆತು ಶುಭ ಕೋರಿಕೊಂಡರು.