ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮೈಸೂರು : ಮೇ 13 ರಂದು ನಡೆಯಲಿರುವ ಮತ ಏಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮತ ಕೇಂದ್ರಕ್ಕೆ ಮೂರು ಸುತ್ತಿನ ಭದ್ರತೆಯನ್ನು ಒದಗಿಸಲಾಗಿದೆ. ಮೇ 10 ರಂದು ನಡೆದ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಮತದಾನದ ಪ್ರಕ್ರಿಯೆ ಮುಗಿದಿದ್ದು, ಮೇ 13 ಶನಿವಾರ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಾದ ಪಿರಿಯಾಪಟ್ಟಣ, ಕೆ ಆರ್ ನಗರ, ಹುಣಸೂರು, ಹೆಚ್ ಡಿ ಕೋಟೆ, ನಂಜನಗೂಡು, ಚಾಮುಂಡೇಶ್ವರಿ, ಕೃಷ್ಣ ರಾಜ, ಚಾಮರಾಜ, ನರಸಿಂಹರಾಜ, ವರುಣಾ ಹಾಗೂ ಟಿ ನರಸೀಪುರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಮೈಸೂರು ನಗರದ ಪಡುವಾರಹಳ್ಳಿಯಲ್ಲಿ ಇರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದೆ.
ಮತಪೆಟ್ಟಿಗೆಗಳನ್ನ ಈ ಕಾಲೇಜಿನಲ್ಲಿಯೇ ಇಡಲಾಗಿದ್ದು, ಮೂರು ಸುತ್ತಿನ ಭದ್ರತೆಯನ್ನು ಸಹ ನೀಡಲಾಗಿದೆ. ಭದ್ರತೆಗಾಗಿ ಸಿಎಪಿಎಫ್ ತುಕಡಿ, ಸಶಸ್ತ್ರ ಮಿಸಲು ಪಡೆ ಹಾಗೂ ಸ್ಥಳೀಯ ಮಿಸಲು ಪಡೆಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮೇ 13 ರಂದು ಮತ ಏಣಿಕೆ ಮಾಡಲು ಕಾಲೇಜಿನ ಒಳಗಡೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಪಕ್ಷಗಳ ಹಾಗೂ ಪಕ್ಷೇತರ 143 ಅಭ್ಯರ್ಥಿಗಳ ಭವಿಷ್ಯ ಶನಿವಾರ ನಿರ್ಧಾರ ಆಗಲಿದೆ.
ಬೆಟ್ಟಿಂಗ್ ನಡೆಯುವ ಮಾಹಿತಿ : ಕಳೆದ ಒಂದು ತಿಂಗಳಿನಿಂದ ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಬುಧವಾರ ಮತದಾನ ಮುಗಿದಿದ್ದು, ಇಂದು ಸೋಲು ಗೆಲುವಿನ ಲೆಕ್ಕಾಚಾರದೊಂದಿಗೆ ಕುಟುಂಬದವರೊಂದಿಗ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಲವು ಕಡೆ ಸೋಲು ಗೆಲುವಿನ ಲೆಕ್ಕಾಚಾರದ ಜೊತೆಗೆ ಬೆಟ್ಟಿಂಗ್ ಸಹ ನಡೆಯುವ ಬಗ್ಗೆ ಮಾಹಿತಿಗಳು ಕೇಳಿ ಬರುತ್ತಿವೆ.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮೇ 13 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ರಾಜ್ಯದ ಗಮನ ವರುಣಾ ಕ್ಷೇತ್ರದ ಫಲಿತಾಂಶದತ್ತ ಕೇಂದ್ರಿಕೃತವಾಗಿದೆ.
ತಡವಾಗಿ ಸ್ಟ್ರಾಂಗ್ ರೂಮ್ ಸೇರಿದ ಮತಪೆಟ್ಟಿಗೆಗಳು : ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರ ಎಂದೇ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಗುರುತಿಸಿಕೊಂಡಿದೆ. ಇದೀಗ ನಿನ್ನೆ ನಡೆದ ಈ ಕ್ಷೇತ್ರದ ಮತಯಂತ್ರಗಳು ತಡವಾಗಿ ಸ್ಟ್ರಾಂಗ್ ರೂಮ್ ಸೇರಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ ಹೆಗಡೆ ಮಾಹಿತಿ ಇಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹು-ಧಾ ಸೆಂಟ್ರಲ್ ಕ್ಷೇತ್ರದ ಮತಯಂತ್ರಗಳು ಗುರುವಾರ ಬೆಳಗ್ಗೆ ಸ್ಟ್ರಾಂಗ್ ರೂಮ್ ಸೇರಿವೆ. ಬೆಳಗಿನ ಬಳಿಕ ಜಿಲ್ಲಾಡಳಿತ ಸ್ಟ್ರಾಂಗ್ ರೂಮ್ ಸೀಲ್ ಮಾಡಿದೆ ಎಂದು ತಿಳಿಸಿದರು.
ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಧಾರವಾಡ ಕೃಷಿ ವಿವಿಯಲ್ಲಿ ಸ್ಟ್ರಾಂಗ್ ರೂಮ್ ಸ್ಥಾಪಿಸಲಾಗಿದ್ದು, ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ನಿನ್ನೆ ಸಂಜೆ ಬಳಿಕವೂ ಮತದಾನ ನಡೆದಿದೆ. ಇದರಿಂದ ಡಿ ಮಸ್ಟರಿಂಗ್ ತಡವಾಗಿ ಆಗಿದ್ದು, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಸ್ಕೂಲ್ಗೆ ನಿನ್ನೆ ರಾತ್ರಿ ತಡವಾಗಿ ಡಿ ಮಸ್ಟರಿಂಗ್‌ಗೆ ಇವಿಎಂ ಬಂದಿದ್ದವು. ಹೀಗಾಗಿ ಮತಯಂತ್ರಗಳು ತಡವಾಗಿ ಎಣಿಕೆ ಕೇಂದ್ರಕ್ಕೆ ಬಂದಿವೆ. ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿಟ್ಟು ಸೀಲ್ ಮಾಡಲಾಗಿದೆ. ಉಳಿದ ಆರು ಕ್ಷೇತ್ರಗಳ ಸ್ಟ್ರಾಂಗ್ ರೂಮ್ ನಿನ್ನೆಯೇ ಸೀಲ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ:ತಡವಾಗಿ ಸ್ಟ್ರಾಂಗ್ ರೂಮ್ ಸೇರಿದ ಹು-ಧಾ ಸೆಂಟ್ರಲ್ ಕ್ಷೇತ್ರದ ಮತಪೆಟ್ಟಿಗೆಗಳು : ಡಿಸಿ ಮಾಹಿತಿ