ಕರ್ನಾಟಕ

karnataka

ETV Bharat / state

ಶ್ರೀ ಬೇಲದಕುಪ್ಪೆ ಮಾದೇಶ್ವರ ಸ್ವಾಮಿ ದೇವಾಲಯಕ್ಕೆ ಎತ್ತಿನಗಾಡಿ ಮತ್ತು ಜಾನುವಾರುಗಳ ನಿಷೇಧ - ದೇವಾಲಯಕ್ಕೆ ಎತ್ತಿನಗಾಡಿ ಮತ್ತು ಜಾನುವಾರುಗಳ ನಿಷೇಧ

ರಾಜ್ಯದ ವಿವಿಧ ಮೂಲೆಗಳಿಂದ ಜಾತ್ರೆಗೆ ಆಗಮಿಸುತ್ತಿದ್ದ ಭಕ್ತರು, ನೂರಾರು ವರ್ಷಗಳಿಂದ ಶ್ರೀ ಬೇಲದಕುಪ್ಪೆ ಮಾದೇಶ್ವರ ದೇವಾಲಯದ ಸುತ್ತ ಜಾನುವಾರುಗಳನ್ನು ಪ್ರದರ್ಶನ ಮಾಡುವ ಸಂಪ್ರದಾಯ ಆಚರಿಸಿಕೊಂಡು ಬಂದಿದ್ದರು..

Beladakuppe temple
ಶ್ರೀ ಬೇಲದಕುಪ್ಪೆ ಮಾದೇಶ್ವರ ಸ್ವಾಮಿ ದೇವಾಲಯ

By

Published : Dec 7, 2020, 2:27 PM IST

ಮೈಸೂರು :ಇತಿಹಾಸ ಪ್ರಸಿದ್ಧ ಶ್ರೀ ಬೇಲದಕುಪ್ಪೆ ಮಾದೇಶ್ವರ ಸ್ವಾಮಿ ದೇವಾಲಯಕ್ಕೆ ಎತ್ತಿನಗಾಡಿ ಮತ್ತು ಜಾನುವಾರುಗಳ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ.

ಶ್ರೀ ಬೇಲದಕುಪ್ಪೆ ಮಾದೇಶ್ವರ ಸ್ವಾಮಿ ದೇವಾಲಯಕ್ಕೆ ಎತ್ತಿನಗಾಡಿ ಮತ್ತು ಜಾನುವಾರುಗಳ ನಿಷೇಧ

ಸರಗೂರು ತಾಲೂಕಿನ ಯಶವಂತಪುರ ಗ್ರಾಮ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಬೇಲದಕುಪ್ಪೆ ಮಹಾದೇಶ್ವರ ದೇವಾಲಯಕ್ಕೆ ಪ್ರತಿ ಕಾರ್ತಿಕ ಕೊನೆಯ ಸೋಮವಾರದಂದು ಸುತ್ತಮುತ್ತಲಿನ ಗ್ರಾಮಸ್ಥರು ಜಾನುವಾರುಗಳನ್ನು ಕರೆದುಕೊಂಡು‌ ಹೋಗಿ ಪೂಜೆ ಸಲ್ಲಿಸುತ್ತಿದ್ದರು.

ಆದರೆ, ಎತ್ತಿನಗಾಡಿ ಮತ್ತು ಜಾನುವಾರುಗಳ ಪ್ರವೇಶಕ್ಕೆ ಜಿಲ್ಲಾಡಳಿತ ತಡೆ ನೀಡಿದೆ. ಇದರಿಂದ ಎತ್ತಿನಗಾಡಿ ಹಾಗೂ ಜಾನುವಾರುಗಳ ಸಮೇತ ದೇವಸ್ಥಾನಕ್ಕೆ ಬಂದ ಭಕ್ತರಿಗೆ ನಿರಾಶೆಯಾಗಿದೆ.

ರಾಜ್ಯದ ವಿವಿಧ ಮೂಲೆಗಳಿಂದ ಜಾತ್ರೆಗೆ ಆಗಮಿಸುತ್ತಿದ್ದ ಭಕ್ತರು, ನೂರಾರು ವರ್ಷಗಳಿಂದ ಶ್ರೀ ಬೇಲದಕುಪ್ಪೆ ಮಾದೇಶ್ವರ ದೇವಾಲಯದ ಸುತ್ತ ಜಾನುವಾರುಗಳನ್ನು ಪ್ರದರ್ಶನ ಮಾಡುವ ಸಂಪ್ರದಾಯ ಆಚರಿಸಿಕೊಂಡು ಬಂದಿದ್ದರು.

ಅಲ್ಲದೆ ನಾಲ್ಕನೇ ಕಾರ್ತಿಕದಂದು ಈ ದೇವರ ದರ್ಶನ ಪಡೆದರೆ ಜಾನುವಾರುಗಳಿಗೆ ಚಪ್ಪೆರೋಗ ಬರುವುದಿಲ್ಲ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ತಾವು ಸಾಕಿದ ಜಾನುವಾರುಗಳನ್ನು ಇಲ್ಲಿಗೆ ಕರೆತಂದು ದೇವರ ಆಶೀರ್ವಾದ ಪಡೆಯುತ್ತಿದ್ದರು.

ಇದನ್ನೂ ಓದಿ: ಕೋವಿಡ್ ನಡುವೆಯೂ ಕಂದಾಯ ಇಲಾಖೆ ನಿರ್ವಹಣೆಯಲ್ಲಿ ಮೈಸೂರಿಗೆ 2ನೇ ಸ್ಥಾನ

ಆದರೆ, ಇಂದು ಅರಣ್ಯಾಧಿಕಾರಿಗಳು ಎತ್ತಿನಗಾಡಿ, ಜಾನುವಾರಗಳ ಸಮೇತ ಬಂದ ಗ್ರಾಮಸ್ಥರನ್ನು ತಡೆದು ಶಾಕ್​ ಕೊಟ್ಟಿದ್ದಾರೆ. ಜಿಲ್ಲಾಡಳಿತದ ಆದೇಶ ಇಲ್ಲದೆ ಪ್ರವೇಶ ನಿರಾಕರಣೆ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡ ಭಕ್ತರು, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details