ಕರ್ನಾಟಕ

karnataka

ETV Bharat / state

ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಆಹಾರಧಾನ್ಯ ವಿತರಣೆ - ಮೈಸೂರು ಸುದ್ದಿ

ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ವಕೀಲ‌ ಪರಮೇಶ್, ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಿದರು.

ಸ್ವಚ್ಛತೆಯಲ್ಲಿ ತಲ್ಲೀನತಾಗಿರುವ ಪೌರ ಕಾರ್ಮಿಕರಿಗೆ ಆಹಾರಧಾನ್ಯ ವಿತರಣೆ
ಸ್ವಚ್ಛತೆಯಲ್ಲಿ ತಲ್ಲೀನತಾಗಿರುವ ಪೌರ ಕಾರ್ಮಿಕರಿಗೆ ಆಹಾರಧಾನ್ಯ ವಿತರಣೆ

By

Published : Mar 30, 2020, 9:31 PM IST

ಮೈಸೂರು: ಕೊರೊನಾ ಸೋಂಕು ಜಗತ್ತಿನಾದ್ಯಂತ ವಿಸ್ತರಿಸಿದೆ. ಆದರೆ ಭಯ ಹಾಗೂ ಆತಂಕ ಎರಡೂ ಇದ್ದರೂ ಪೌರಕಾರ್ಮಿಕರು ತಮ್ಮ ಕೆಲಸದಿಂದ ಹಿಂದೆ ಸರಿಯದೇ ಪರಿಸರ ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆ ಅವರಿಗೆ ಆಹಾರಧಾನ್ಯ ವಿತರಣೆ ಮಾಡಲಾಯಿತು.

ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ವಕೀಲ‌ ಪರಮೇಶ್, ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಿದರು.

ಸ್ವಚ್ಛತೆಯಲ್ಲಿ ತಲ್ಲೀನತಾಗಿರುವ ಪೌರಕಾರ್ಮಿಕರಿಗೆ ಆಹಾರಧಾನ್ಯ ವಿತರಣೆ

ತಮ್ಮ ಮತ್ತು ಕುಟುಂಬದ ಆರೋಗ್ಯವನ್ನೂ ಲೆಕ್ಕಿಸಿದೆ ಇತರರ ಆರೋಗ್ಯಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಪೌರಕಾರ್ಮಿಕರು ನಮಗೆ ನಿಜವಾದ ದೇವರು ಎಂದು ಪರಮೇಶ್, ಪೌರಕಾರ್ಮಿಕನ್ನ ಗುಣಗಾನ ಮಾಡಿದ್ರು.

ನಾವೆಲ್ಲರೂ ಕೊರೊನಾ ವೈರಸ್ ಭೀತಿಯಿಂದ ಮನೆಯಲ್ಲಿ ಇದ್ದೇವೆ. ನಮ್ಮ ಮಕ್ಕಳು ಹಾಗೂ ಬಂಧು ಬಳಗದ ಆರೋಗ್ಯದ ಮೇಲೆ ವಿಶೇಷ ಕಾಳಜಿಯನ್ನು ಹೊಂದಿದ್ದೇವೆ. ಆದರೆ, ಪೌರಕಾರ್ಮಿಕರು ಕೊರೊನಾ ವೈರಸ್ ಬಗ್ಗೆ ಹೆದರದೆ ಅದರ ಹರಡವಿಕೆಯನ್ನು ತಡೆಯಲು ತಮ್ಮ ಕುಟುಂಬದ ಸುಖ ಸಂತೋಷವನ್ನು ಬದಿಗೊತ್ತಿ ಸೇವೆಗೆ ಸಜ್ಜಾಗಿ ನಿಂತ್ತಿದ್ದಾರೆ. ಹೀಗೆ ನಿಸ್ವಾರ್ಥ ಸೇವೆ ಮಾಡುವವರಿಗೆ ಬೆಂಬಲ ನೀಡಬೇಕು ಎಂದರು.

ABOUT THE AUTHOR

...view details