ಕರ್ನಾಟಕ

karnataka

ETV Bharat / state

ಟಿಬೆಟಿಯನ್ ಕ್ಯಾಂಪ್ ವತಿಯಿಂದ ಆದಿವಾಸಿಗಳಿಗೆ ಆಹಾರದ ಕಿಟ್‌ ವಿತರಣೆ - Distribution of food kit

ಆದಿವಾಸಿ ಬಡವರು, ನಿರ್ಗತಿಕರಿಗೆ ಹುಣಸೂರು ಹಾಗೂ ಹೊಸಕೋಟೆ ತಾಲೂಕಿನಲ್ಲಿ ಗುರುಪುರ ಟಿಬೆಟಿಯನ್‌ ​ಕ್ಯಾಂಪ್​ ವತಿಯಿಂದ ಆಹಾರದ ಕಿಟ್‌ ವಿತರಣೆ ನಡೆಯಿತು.

Distribution of food kit from Tibetan camp
ಟಿಬೆಟಿಯನ್​ರಿಂದ ಆಹಾರದ ಕಿಟ್​ ವಿತರಣೆ

By

Published : Apr 11, 2020, 5:47 PM IST

Updated : Apr 11, 2020, 5:54 PM IST

ಮೈಸೂರು: ಕೊರೊನಾ ಸೋಂಕು ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್ ಇರುವ ಕಾರಣ ಬಡವರು, ನಿರ್ಗತಿಕರು ಹಾಗೂ ಆದಿವಾಸಿಗಳಿಗೆ ಟಿಬೆಟಿಯನ್ನರು ಆಹಾರದ ಕಿಟ್​ಗಳನ್ನು ವಿತರಿಸಿದರು.

ಟಿಬೆಟಿಯನ್ನರಿಂದ ಆಹಾರದ ಕಿಟ್​ ವಿತರಣೆ

ಹುಣಸೂರು-ಹೆಚ್.ಡಿ.ಕೋಟೆ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಹುಣಸೂರು ತಾಲೂಕಿನ ಗುರುಪುರ ಟಿಬೆಟಿಯನ್ ಕ್ಯಾಂಪ್‌ನ ಟಿಬೆಟಿಯನ್ನರು ತಾಲೂಕಿನ ಭೀಮನಹಳ್ಳಿ ಗಿರಿಜನ ಹಾಡಿ ನಿವಾಸಿಗಳಿಗೆ ಅಗತ್ಯ ಸಾಮಾಗ್ರಿಗಳನ್ನು ಒದಗಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಆದಿವಾಸಿ ಜನರು ಆಹಾರದ ಕಿಟ್‌ ಪಡೆದರು.

ಅಕ್ಕಿ, ಈರುಳ್ಳಿ, ಅಡುಗೆ ಎಣ್ಣೆ, ಬಿಸ್ಕೆಟ್​, ಟೊಮೊಟೋ, ಟೂತ್ ಪೇಸ್ಟ್, ಹಾಲು, ಖಾರದ ಪುಡಿ ಹಾಗು ಬೇಳೆ ಸೇರಿದಂತೆ ಹಲವು ಪದಾರ್ಥಗಳು ಆಹಾರದ ಕಿಟ್‌ನಲ್ಲಿದ್ದವು.

ಸಾಮಾಜಿಕ ಅಂತರ ಕಾಯ್ದುಕೊಂಡು ಗಿರಿಜನರಿಗೆ ಆಹಾರದ ಕಿಟ್ ವಿತರಣೆ ಕಾರ್ಯ ನಡೆಯಿತು. ಭೀಮನಹಳ್ಳಿ ಹಾಡಿ, ಕುಂಟಾರಿಹಾಡಿ, ಮಂಜುಕುಪ್ಪೆ ಹಾಡಿ, ಹಳೆ ವರಂಚಿ ಹಾಡಿ ಸೇರಿದಂತೆ 16 ಹಾಡಿಗಳ ಆದಿವಾಸಿಗಳು ಇದರ ಪ್ರಯೋಜನ ಪಡೆದರು.

Last Updated : Apr 11, 2020, 5:54 PM IST

ABOUT THE AUTHOR

...view details