ಮೈಸೂರು:ಹೊಸ ವರ್ಷ ಹಾಗೂ ವೈಕುಂಠ ಏಕಾದಶಿ ನಿಮಿತ್ತ ನಗರದ ದೇವಾಲಯದಲ್ಲಿ ತಿರುಪತಿ ಮಾದರಿಯ ಎರಡು ಲಕ್ಷ ಲಾಡುಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರು ನಗರದ ವಿಜಯನಗರದಲ್ಲಿರುವ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಹೊಸ ವರ್ಷದ ಅಂಗವಾಗಿ ಹಾಗೂ ವೈಕುಂಠ ಏಕಾದಶಿಯ ಪ್ರಯುಕ್ತ ಈ ವರ್ಷ ಭಕ್ತಾದಿಗಳಿಗೆ ಎರಡು ಲಕ್ಷ ಲಾಡುಗಳನ್ನು ವಿತರಿಸಲು ಸಿದ್ಧತೆ ನಡೆಸಿದೆ.
ಹೊಸ ವರ್ಷದ ನಿಮಿತ್ತ 2 ಲಕ್ಷ ತಿರುಪತಿ ಮಾದರಿ ಲಾಡು ವಿತರಣೆ - Bhashyam Swamiji
ಹೊಸ ವರ್ಷದ ನಿಮಿತ್ತ ಹಾಗೂ ವೈಕುಂಠ ಏಕಾದಶಿಯ ಪ್ರಯುಕ್ತ ಈ ವರ್ಷ ಭಕ್ತಾದಿಗಳಿಗೆ ಎರಡು ಲಕ್ಷ ಲಾಡು ವಿತರಿಸಲಿದೆ ಯೋಗನರಸಿಂಹ ಸ್ವಾಮಿ ದೇವಾಲಯ.
ಜನವರಿ 1 ರಂದು ಹೊಸ ವರ್ಷ ಹಾಗೂ ಜನವರಿ 2 ರಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ 10 ಕ್ವೀಂಟಲ್ ಪುಳಿಯೋಗರೆಯನ್ನು ವಿತರಿಸಲಿದ್ದು, ಬೆಳಗಿನ ಜಾವದಿಂದ ರಾತ್ರಿವರೆಗೆ ವಿತರಿಸಲಾಗುವುದು ಎಂದು ದೇವಾಲಯದ ಮುಖ್ಯಸ್ಥ ಡಾ. ಭಾಷ್ಯಂ ಸ್ವಾಮೀಜಿ ವಿವರಿಸಿದರು.
ಭಾಷ್ಯಂ ಸ್ವಾಮೀಜಿ ಹೇಳಿದ್ದೇನು?: 1994 ರಿಂದ ಹೊಸ ವರ್ಷಕ್ಕೆ ಅಂದು ಮೈಸೂರು ಮಹಾರಾಜರ ಕೈಯಿಂದ 25,000 ಲಾಡು ವಿತರಿಸುವ ಕೆಲಸ ಆರಂಭವಾಗಿದ್ದು, ಕೋವಿಡ್ ಸಂದರ್ಭದಲ್ಲಿ ಎರಡು ವರ್ಷ ವಿತರಣೆ ನಡೆಯಲಿಲ್ಲ. ಈ ವರ್ಷ 2ಲಕ್ಷ ಲಾಡನ್ನು ಎಲ್ಲ ಭಕ್ತರಿಗೂ ವಿತರಣೆ ಮಾಡಲಾಗುತ್ತದೆ.
ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಲಾಡು ಮತ್ತು ಪುಳಿಯೋಗರೆಯನ್ನ ವಿತರಿಸಲಾಗುತ್ತದೆ. ಎಲ್ಲರೂ ಹೊಸ ವರ್ಷ ಹಾಗೂ ವೈಕುಂಠ ಏಕಾದಶಿಯ ದಿನ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಬೇಕು ಎಂದು, ಮನವಿ ಮಾಡುತ್ತೇನೆಂದು ಭಾಷ್ಯಂ ಸ್ವಾಮೀಜಿ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ವಿಶೇಷ ವಿಮಾನದ ಮೂಲಕ ಮೈಸೂರಿನಿಂದ ಅಹಮದಾಬಾದ್ಗೆ ತೆರಳಿದ ಪ್ರಹ್ಲಾದ್ ಮೋದಿ ಕುಟುಂ