ಮೈಸೂರು: ಇಂದಿನ ಸಚಿವ ಸಂಪುಟ ವಿಸ್ತರಣೆ ನಂತರ ಬಿಜೆಪಿ ಒಳಗಡೆ ಬೇಗುದಿ ಕುದಿಯುತ್ತಿದ್ದು, ಇದು ಯಾವಾಗ ಬೇಕಾದರೂ ಸರ್ಕಾರಕ್ಕೆ ತೊಂದರೆ ಆಗಬಹುದು ಎಂದು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಬಿಜೆಪಿ ಒಳಗಡೆ ಬೇಗುದಿ ಕುದಿಯುತ್ತಿದೆ: ಮಾಜಿ ಸಚಿವ ಹೆಚ್. ಸಿ. ಮಹದೇವಪ್ಪ - ಬಿಜೆಪಿ ಒಳಗಡೆ ಅಸಮಾಧಾನ
ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದ ನಂತರ ಪಕ್ಷದೊಳಗಿನ ಶಾಸಕರಲ್ಲೇ ಅಸಮಾಧಾನ ಉಂಟಾಗಿದೆ ಎಂದು ಮಾಜಿ ಸಚಿವ ಹೆಚ್. ಸಿ. ಮಹದೇವಪ್ಪ ಹೇಳಿದ್ದಾರೆ.
ಡಾ.ಎಚ್. ಸಿ ಮಹದೇವಪ್ಪ ಹೇಳಿಕೆ
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸಚಿವರಾಗಿ ಅಧಿಕಾರ ವಹಿಸಿಕೊಂಡ ಅತೃಪ್ತರಿಗೆ ತೃಪ್ತಿಯಾಗಿದೆ. ಅವರು ಈಗ ಕೆಲಸ ಮಾಡಬೇಕು, ಆದರೆ ಈಗಿನ ಸರ್ಕಾರದಲ್ಲಿ ಯಾವುದೇ ಕಾರ್ಯಕ್ರಮಗಳು ಇಲ್ಲ, ಹಣವೂ ಇಲ್ಲ. ಇದೊಂದು ರೀತಿ ಅಸಮಾಧಾನದಿಂದ ಕೂಡಿರುವ ಗೊಂದಲದ ಸರ್ಕಾರವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಒಳಗೇ ಬೇಗುದಿ ಕುದಿಯುತ್ತಿದೆ, 100 ಜನ ಗೆದ್ದಿದ್ದರೂ ಕೇವಲ 17 ಜನರಿಂದ ಸರ್ಕಾರ ಇಲ್ಲಿವರೆಗೆ ನಡೆಯುತ್ತಿದೆ. ಬಿಜೆಪಿಯವರು ರಾಜಕೀಯ ಸಿದ್ಧಾಂತ ಇಲ್ಲದೆ, ಅಧಿಕಾರವನ್ನೇ ಮೂಲವಾಗಿಟ್ಟುಕೊಂಡಿದ್ದಾರೆ ಎಂದು ಮಹದೇವಪ್ಪ ಟೀಕಿಸಿದರು.