ಕರ್ನಾಟಕ

karnataka

ETV Bharat / state

ದಸರಾ ಪ್ರಾಧಿಕಾರ ರಚನೆಗೆ ಸರ್ಕಾರ ಚಿಂತನೆ: ಸಚಿವ ವಿ. ಸೋಮಣ್ಣ - ದಸರಾ ಮಹೋತ್ಸವ

ದಸರಾ ಹಬ್ಬಕ್ಕೆ ಸೀಮಿತವಾದ ದಸರಾ ಪ್ರಾಧಿಕಾರ ರಚನೆಗೆ ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಮಾಜಿ ಮೇಯರ್​ಗಳ ಸಭೆ ಬೆಯಲ್ಲಿ ತಿಳಿಸಿದರು.

ಮಾಜಿ ಮೇಯರ್​ಗಳ ಜತೆ ಸಚಿವ ವಿ.ಸೋಮಣ್ಣ ಸಭೆ

By

Published : Sep 11, 2019, 10:56 PM IST

ಮೈಸೂರು: ನಾಡಹಬ್ಬ ದಸರಾ ಆಚರಣೆಗೆ ಸೀಮಿತವಾಗಿ, ದಸರಾ ಪ್ರಾಧಿಕಾರ ರಚನೆಗೆ ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮಾಜಿ ಮೇಯರ್​ಗಳ ಜತೆ ಸಚಿವ ವಿ.ಸೋಮಣ್ಣ ಸಭೆ

ದಸರಾ ಮಹೋತ್ಸವ ಆಚರಣೆ ಸಂಬಂಧ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಮಾಜಿ ಮೇಯರ್​ಗಳ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ಮೇಯರ್​ಗಳ ಅಧಿಕಾರವಧಿಯಲ್ಲಿ ಭಿನ್ನ ರೀತಿಯಲ್ಲಿ ದಸರಾ ಆಚರಿಸಿರುವ ಅನುಭವವಿದೆ. ಈ ಬಾರಿ ಎಲ್ಲ ಮಾಜಿ ಮೇಯರ್​ಗಳು ನಮ್ಮೊಂದಿಗೆ ಪಕ್ಷಾತೀತವಾಗಿ ಕೈಜೋಡಿಸುವ ಮೂಲಕ ತಮ್ಮ ಅನುಭವಗಳನ್ನು ನಮಗೆ ಧಾರೆ ಎರೆಯಿರಿ ಎಂದು ಮನವಿ ಮಾಡಿದರು.

ದಸರಾ ಮೆರವಣಿಗೆ ವೇಳೆ ಈ ಹಿಂದೆ ಆಗಿರುವ ಗೊಂದಲಗಳಿಗೆ ತೆರೆ ಎಳೆಯಲಾಗುವುದು. ಜಂಬೂಸವಾರಿ ಮೆರವಣಿಗೆಯು ಯಾವುದೇ ಲೋಪಗಳಿಲ್ಲದೆ ಶಿಸ್ತುಬದ್ಧವಾಗಿ ಸಾಗುವಂತೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಹೇಳಿದರು.

ಮಾಜಿ ಮೇಯರ್ ಹಾಗೂ ಮಾಜಿ ಉಪಮೇಯರ್ ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳಿಗೆ ಜಂಬೂಸವಾರಿ ವೀಕ್ಷಣೆಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ದಸರಾ ಪಾಸ್​ಗಳ ವಿತರಣೆಯಲ್ಲಿ ಆಗುತ್ತಿದ್ದ ಗೊಂದಲಗಳಿಗೆ ಮುಕ್ತಿ ಹಾಡಿ, ಪಾಸುಗಳು ಅರ್ಹರಿಗೆ ತಲುಪುವ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಜಂಬೂ ಸವಾರಿ ಮೆರವಣಿಗೆಯನ್ನು ಜನಸಾಮಾನ್ಯರು ವೀಕ್ಷಿಸುವಂತಹ ವಾತಾವರಣ ನಿರ್ಮಿಸಲಾಗುವುದು ಎಂದರು.

ಎಲ್ಲರೂ ಮುಕ್ತ ಮನಸ್ಸಿನಿಂದ ನಾಡಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸತನಕ್ಕೆ ತೆರೆದುಕೊಂಡು, ಸಾಂಸ್ಕೃತಿಕ ಹಿರಿಮೆಯನ್ನು ಸಾರೋಣ ಎಂದರು.

ABOUT THE AUTHOR

...view details